Home Mangalorean News Kannada News ಸುಬ್ರಮಣ್ಯ: ಸಿಡಿಲು ಬಡಿದು ನವವಿವಾಹಿತ ಯುವಕ ಮೃತ್ಯು

ಸುಬ್ರಮಣ್ಯ: ಸಿಡಿಲು ಬಡಿದು ನವವಿವಾಹಿತ ಯುವಕ ಮೃತ್ಯು

Spread the love

ಸುಬ್ರಮಣ್ಯ: ಸಿಡಿಲು ಬಡಿದು ನವವಿವಾಹಿತ ಯುವಕ ಮೃತ್ಯು

ಸುಬ್ರಮಣ್ಯ; 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಇಂದು ಸಂಜೆ ನಡೆದಿದೆ. ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮ ಸುಂದ‌ರ್ (34) ಮೃತ ದುರ್ದೈವಿ.


ಸಂಜೆ ವೇಳೆ ಮಳೆ ಆರಂಭಕ್ಕೂ ಮೊದಲು ಗುಡುಗು ಸಹಿತ ಗಾಳಿ ಬೀಸುತ್ತಿತ್ತು. ಹಾಗಾಗಿ ಮಳೆ ಬರಬಹುದು ಎಂದು ಸೋಮಸುಂದರ್ ಮನೆಯಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಿಕೆಯನ್ನು ರಾಶಿ ಮಾಡುತ್ತಿದ್ದರು. ಈ ವೇಳೆ ಸಿಡಿಲು ಬಡಿದಿದೆ.

ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.


Spread the love

Exit mobile version