Home Mangalorean News Kannada News ಸುರತ್ಕಲ್ : ಕೊಲೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

ಸುರತ್ಕಲ್ : ಕೊಲೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

Spread the love

ಸುರತ್ಕಲ್ : ಕೊಲೆ ಪ್ರಕರಣ; ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

ಸುರತ್ಕಲ್ : ವಿವಿಧ ಅಪರಾಧ ಪ್ರಕರಣಗಳು ಸೇರಿ ಲೆಫ್ಟಿ ಸಫ್ವಾನ್‌ ಗೆ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಭಾಗಿಯಾಗಿ 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಸಫ್ವಾನ್ ಹುಸೈನ್ ಸಹಚರನೋರ್ವವನ್ನು ಸಿಸಿಬಿ ಪೊಲೀಸರು ಬಂಧಿಸಿ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬಂಧಿತನನ್ನು ಬಳ್ಳಾರಿ ಜಿಲ್ಲೆಯ ಸದ್ಯ ಬೆಂಗಳೂರಿನ ಶ್ಯಾಮ್ ಪುರ ಬೇಕರಿ ಬಳಿಯ ನಿವಾಸಿ ಸುಫಿಯಾನ್ ಹುಸೈನ್ ಯಾನೆ ಕೊಟ್ರೇಶಿ (31) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಗುಲ್ಬರ್ಗಾ, ಬಳ್ಳಾರಿ , ಮುಂಬೈ ಆಂಧ್ರ ಪ್ರದೇಶದಲ್ಲಿ ತಲೆ ಮರೆಸಿಕೊಂಡು ಬಳಿಕ ಬೆಂಗಳೂರಿನಲ್ಲಿ ಹುಸೈನ್ ಎಂದು ಬದಲಿಸಿ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಪಡೆದು ಅಲ್ಲಿನ ಹುಡುಗಿಯನ್ನು ಮದುವೆಯಾಗಿ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳಿಕ ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಆಕೆಯನ್ನು ಕೊಲೆಗೈದ ಪ್ರಕರಣದಲ್ಲಿ ಜೈಲು ಸೇರಿದ್ದ. ಈ ವೇಳೆ ತನ್ನ ಹೆಸರನ್ನು ಸೂಫೀಯಾನ್ ಎಂದು ಪರಿಚಯಿಸಿಕೊಂಡು ರೌಡಿ ಶೀಟರ್ ಸಫ್ವಾನ್ ಹುಸೈನ್ ನ ಗ್ಯಾಂಗ್‌ ಸೇರಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನ ಬಗ್ಗೆ ಮಾಹಿತಿ ಕಲೆಹಾಕಿಕೊಂಡ ಮಂಗಳೂರು ನಗರ ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ. ಹಳ್ಳಿಯ ಶ್ಯಾಮ್ ಪುರ್ ರೈಲ್ವೇ ಗೇಟ್ ಬಳಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯ ವಿರುದ್ಧ ಸುರತ್ಕಲ್, ಬಜ್ಪೆ, ಬಳ್ಳಾರಿ, ಹೊಸಪೇಟೆಯಲ್ಲಿ ಕೊಲೆ, ಕಳವು, ಸುಳಿಗೆ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಈತನನ್ನು ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

Exit mobile version