Home Mangalorean News Kannada News ಸುರತ್ಕಲ್ : ತೋಕೂರು – ಪಾದೂರು ಕೊಳವೆ  ಬದಲಿ ಮಾರ್ಗ ಕಂಡುಕೊಳ್ಳಲಿ ; ಡಾ. ದೇವೀಪ್ರಸಾದ್ ಶೆಟ್ಟಿ

ಸುರತ್ಕಲ್ : ತೋಕೂರು – ಪಾದೂರು ಕೊಳವೆ  ಬದಲಿ ಮಾರ್ಗ ಕಂಡುಕೊಳ್ಳಲಿ ; ಡಾ. ದೇವೀಪ್ರಸಾದ್ ಶೆಟ್ಟಿ

Spread the love

ಸುರತ್ಕಲ್ : ತೋಕೂರು – ಪಾದೂರು ನಡುವೆ ಅಳವಡಿಸಲು ಉದ್ದೇಶಿಸಲಾದ ಐಎಸ್ಆರ್ ಪಿ ಎಲ್ ಕೊಳವೆ ಮಾರ್ಗ ಬಗ್ಗೆ ಬಾಳ, ತೋಕೂರು, ಕಾಟಿಪಳ್ಳ ಪ್ರದೇಶದ ಜನರ ಜನಜಾಗೃತಿ ಕಾರ್ಯಕ್ರಮವು  ಎಪ್ರಿಲ್ 28 ಮಂಗಳವಾರ ಕಾಟಿಪಳ್ಳ ಗಣೇಶಪುರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಜರಗಿತು.

pipe line final 1

ಸಾಮಾಜಿಕ ಹೋರಾಟಗಾರ ಡಾ. ದೇವೀಪ್ರಸಾದ್ ಶೆಟ್ಟಿ ಐಕಳ ಬಾವ ಈ ಸಂದರ್ಭದಲ್ಲಿ ಮಾತನಾಡುತ್ತಾ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಳವಡಿಸಲು ಉದ್ದೇಶಿಸಲಾದ ಪೈಪ್ಲೈನನ್ನು ಜನಾಂದೋಲನದ ಮೂಲಕ ವಿರೋಧಿಸುವುದು ಅತೀ ಅಗತ್ಯವಾಗಿದೆ. ದೇಶದ ಅಗತ್ಯಕ್ಕೆ ಎಲ್ಲರೂ ಸ್ಪಂದಿಸಬೇಕಾಗಿರುವುದು ಅತೀ ಅಗತ್ಯ, ಆದರೆ ರೈತರನ್ನು ಕತ್ತಲಲ್ಲಿಟ್ಟು ಅವರಿಗೆ ಮೋಸ ಮಾಡುವುದರ ಮೂಲಕ, ಬೋಗಸ್ ದಾಖಲೆ ತಯಾರಿಸಿ ಯೋಜನೆಗಳನ್ನು ರೂಪಿಸುವುದು ದೇಶ ಸೇವೆಯಾಗುವುದಿಲ್ಲ. ದೇಶ ಸೇವೆ ಎಂದು ರೈತರ ಮೇಲೆ ದೌರ್ಜನ್ಯ ಸರಿಯಲ್ಲ. ದೇಶ ಎಂದರೆ ಪ್ರಜೆಗಳೇ ಆಗಿದ್ದಾರೆ. ಅವರ ಮೇಲೆ ಅಧಿಕಾರಿಗಲು ದೌರ್ಜನ್ಯ ಎಸಗುವುದು ಖಂಡನಾರ್ಹ ಎಂದರು. ರೈತರಿಗೆ ತೊಂದರೆ ನೀಡಿ ಕೊಳವೆ ಅಳವಡಿಸುವ ಬದಲು ಬೇರೆ ದಾರಿಯನ್ನು ಕಂಡುಕೊಳ್ಳಲಿ. ರೈತರ ಭೂಮಿಯೇ ಬೇಕು ಎಂದಾದಲ್ಲಿ ಕಾನೂನು ಬದ್ಧವಾಗಿ ಪಾರದರ್ಶಕ ಪ್ರಕ್ರಿಯೆಗಳನ್ನು ಜರಗಿಸಿ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಲಿ ಎಂದು ಅವರು ಹೇಳಿದರು.

ತೋಕೂರು – ಪಾದೂರು ಜನಜಾಗೃತಿ ಸಮಿತಿಯ ಕಾನೂನು ಸಲಹೆಗಾರರಾದ ಜಗದೀಶ ರಾವ್ ಪಿ ಮಾತನಾಡಿ ಐಎಸ್ ಆರ್ ಎಲ್ ಪೈಪ್ ಲೈನ್ ಅಳವಡಿಸುವ ಬಗ್ಗೆ ನಡೆದ ಪ್ರಕ್ರಿಯೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಮೋಸ ವಂಚನೆಗಳನ್ನು ಮಾಡಲಾಗಿದೆ. ಬಾಧಿತರು ಈ ಬಗ್ಗೆ ತಿಳಿದುಕೊಂಡು ಪ್ರತಿಭಟನೆಗೆ ತೊಡಗಿ, ದಾಖಲೆಗಳನ್ನು ಜಾಲಾಡಿದ ನಂತರ ಕೆಐಡಿಬ ಮತ್ತು ಐಎಸ್ಆರ್ ಪಿ  ಎಲ್ ಅಧಿಕಾರಿಗಳು ಪರೋಕ್ಷವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಾಧಿತರು ನ್ಯಾಯಾಲಯಗಳಲ್ಲಿ ದಾವೆಯನ್ನು ದಾಖಲಿಸುವುದರ ಮೂಲಕ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಪಾದೂರು ಜನಜಾಗೃತಿ ಸಮಿತಿಯ ಶಿವರಾಮ ಶೆಟ್ಟಿ ಮಾತನಾಡುತ್ತಾ ಅಧಿಕಾರಿಗಳು ಮಾಡುತ್ತಿರುವ ಅನ್ಯಾಯಗಳಿಗೆ ಜನಾಂದೋಲನವೇ ಮಾರ್ಗವಾಗಿದ್ದು ಉಡುಪಿ ಮತ್ತು ದ.ಕ. ಜಿಲ್ಲೆಯ 24 ಗ್ರಾಮಗಳ ಬಾಧಿತರು ಒಗ್ಗಟ್ಟಿನಿಂದ ಆಂದೋಲವನ್ನು ನಡೆಸಿದರೆ ಯಶಸ್ವು ಖಂಡಿತವಾಗಿಯೂ ದೊರಕುತ್ತದೆ ಎಂದರು.
ಕಾಟಿಪಳ್ಳದಲ್ಲಿ ಪಣಂಬೂರು ಪುನರ್ ನಿರ್ವಸಿತರ ಜನವಸತಿ ಪ್ರದೇಶ, ಎ ಗ್ರೇಡ್ ಆದಾಯವುಳ್ಳ ದೇವಸ್ಥಾನದ ಪರಿಸರ, ಬಸ್ಸು ನಿಲ್ದಾಣ, ರಿಕ್ಷಾಪಾಕ್೵ ಮತ್ತು ಸಾರ್ವಜನಿಕ ಮೈದಾನದಲ್ಲಿ ಪೈಪ್ ಲೈನ್ ಹಾದು ಹೋಗುತ್ತಿದೆ. ಇದು ಕಾನೂನು ವಿರೋಧಿಯಾಗಿದೆ. ಆದುದರಿಂದ ಈ ಕೊಳವೆ ಮಾರ್ಗಕ್ಕೆ ವಸತಿ, ಕಟ್ಟಡ, ಕೃಷಿಭೂಮಿರಹಿತವಾದ ಬದಲಿ ಮಾರ್ಗವನ್ನು ಕಂಡು ಕೊಳ್ಳಬೇಕಾಗಿದೆ. ಕಾನೂನು ವಿರೋಧಿಯಾಗಿ, ಜನರಿಗೆ ಸರಿಯಾದ ಮಾಹಿತಿ ನೀಡದೆ ಕೊಳವೆ ಅಳವಡಿಸುವುದನ್ನು ನಾವು ಸಂಘಟಿತರಾಗಿ ತಡೆ ಹಿಡಿಯುತ್ತೇವೆ. ಇದಕ್ಕೆ ಎಲ್ಲಾ 24 ಗ್ರಾಮಗಳ ಗ್ರಾಮಸ್ಥರ ಬೆಂಬಲ ಬೇಕಾಗಿದೆ ಎಂದು ಬಾಳ, ತೋಕೂರು, ಕಾಟಿಪಳ್ಳ ಪ್ರದೇಶದ ಜನರು ಈ ಸಂದರ್ಭದಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಳ, ತೋಕೂರು, ಕಾಟಿಪಳ್ಳ ಪ್ರದೇಶದ ಜನಜಾಗೃತಿ ಸಮಿತಿ ರಚಿಸಲಾಯಿತು

ಜನಜಾಗೃತಿ ಸಮಿತಿಯ ಚಿತ್ತರಂಜನ್ ಭಂಡಾರಿ ಬಾಳ ಹೆಚ್ಚಿನ ಮಾಹಿತಿಗಳನ್ನು ನೀಡಿದರು. ಸೂರಿಂಜೆ ಪಂಚಾಯತ್ ಅಧ್ಯಕ್ಷ ವಿನೀತ್ ಶೆಟ್ಟಿ, ಮಧ್ಯ ಗ್ರಾಮಪಂಚಾಯತ್ ಉಪಾಧ್ಯಕ್ಷ ಪುಷ್ಪರಾಜ್ಶೆಟ್ಟಿ ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಕುತ್ತೆತ್ತೂರು ಸ್ವಾಗತಿಸಿ, ವಂದಿಸಿದರು


Spread the love

Exit mobile version