Home Mangalorean News Kannada News ಸುರತ್ಕಲ್:‌ ಸಮುದ್ರ ಕಿನಾರೆಯಲ್ಲಿ ಈಜುತ್ತಿದ್ದ ಮೂವರಲ್ಲಿ ಓರ್ವ ನೀರು ಪಾಲು

ಸುರತ್ಕಲ್:‌ ಸಮುದ್ರ ಕಿನಾರೆಯಲ್ಲಿ ಈಜುತ್ತಿದ್ದ ಮೂವರಲ್ಲಿ ಓರ್ವ ನೀರು ಪಾಲು

Spread the love

ಸುರತ್ಕಲ್:‌ ಸಮುದ್ರ ಕಿನಾರೆಯಲ್ಲಿ ಈಜುತ್ತಿದ್ದ ಮೂವರಲ್ಲಿ ಓರ್ವ ನೀರು ಪಾಲು

ಸುರತ್ಕಲ್:‌ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ಈಜಲು ತೆರಳದ್ದ ಮೂವರ ಪೈಕಿ ಓರ್ವ ನೀರು ಪಾಲಾಗಿದ್ದು, ಇಬ್ಬರು ದಡ ಸೇರಿರುವ ಘಟನೆ ಗುರುವಾರ ಸಂಜೆ ಸುರತ್ಕಲ್‌ ನಲ್ಲಿ ವರದಿಯಾಗಿದೆ.

ಸಮುದ್ರ ಪಾಲಾದವರನ್ನು ಮೂಲತಃ ಉತ್ತರ ಕರ್ನಾಟಕ ನಿವಾಸಿ ಸದ್ಯ ಸುರತ್ಕಲ್‌ ಕಾನದಲ್ಲಿವ ಬಸವರಾಜು (22) ಎಂದು ಗುರುತಿಸಲಾಗಿದ್ದು, ಅವರ ಪತ್ನಿಯ ಅಕ್ಕನ ಮಕ್ಕಳಾದ ರವಿ ಮತ್ತು ಸಿದ್ದು ಎಂಬವರು ದಡ ಸೇರಿದವರು ಎಂದು ತಿಳಿದು ಬಂದಿದೆ.

ರಾಜು ಮತ್ತು ಅವರ ಬಾವ ಬಸವರಾಜು, ಪತ್ನಿಯ ಅಕ್ಕನ ಮಕ್ಕಳಾದ ರವಿ ಮತ್ತು ಸಿದ್ದು ಜೊತೆಗೂಡಿ ಸುರತ್ಕಲ್‌ ಗುಡ್ಡಕೊಪ್ಲ ಸಮುದ್ರದಲ್ಲಿ ಈಜಲೆಂದು ತೆರಳಿದ್ದರು. ಈ ವೇಳೆ ಸ್ಥಳೀಯರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡದ್ದರು. ಆದರೂ ಈಜಲು ಬುರುತ್ತದೆ ಎಂದು ಎಂದು ಹೇಳಿ ಬಸವರಾಜು, ಸಿದ್ದು ಮತ್ತು ರವಿ ಸಮುದ್ರದಲ್ಲಿ ಆಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಬೃಹತ್‌ ಅಲೆಯ ಸೆಳೆತಕ್ಕೆ ಸಿಲುಕಿ ಮೂವರೂ ಸಮುದ್ರ ಪಾಲಾಗಿದ್ದರು. ಈ ಪೈಕಿ ಸಿದ್ದು ಮತ್ತು ರವಿ ಈಜಿ ದಡ ಸೇರಿದ್ದು, ಬಸವರಾಜು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂದು ರಾಜು ಅವರು ಸುರತ್ಕಲ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಮುದ್ರದಲ್ಲಿ ನೀರು ಪಾಲಾಗಿರುವ ಬಸವರಾಜು ಅವರಿಗೆ 7ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ಹೇಳಲಾಗಿದೆ. ಸದ್ಯ ರಾಜು ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


Spread the love

Exit mobile version