Home Mangalorean News Kannada News ಸುಳ್ಯ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ, ಮತ್ತೊಂದು ಪ್ರಕರಣ ದಾಖಲು

ಸುಳ್ಯ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ, ಮತ್ತೊಂದು ಪ್ರಕರಣ ದಾಖಲು

Spread the love

ಸುಳ್ಯ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ, ಮತ್ತೊಂದು ಪ್ರಕರಣ ದಾಖಲು

ಸುಳ್ಯ: ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್. (24) ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಕಲಂ 457 ಐಪಿಸಿ ರಲ್ಲಿ ಆರೋಪಿಗೆ ಆರು ತಿಂಗಳ ಸಾದ ಸಜೆ ಹಾಗೂ 500 ದಂಡ, ಕಲಂ 380 ಐಪಿಸಿಯಲ್ಲಿ 10 ತಿಂಗಳ ಸಾದ ಸಜೆ ಹಾಗೂ 500 ದಂಡವನ್ನು ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 10 ದಿನಗಳ ಹೆಚ್ಚುವರಿ ಸಜೆ ನೀಡಿ ಆದೇಶಿಸಿದೆ.

ಮುಂದುವರಿದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಆರೋಪಿ ಶರತ್ ವಿರುದ್ಧ ಬಿಎನ್ ಎಸ್ ಕಲಂ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 1000 ರೂ. ದಂಡ ಅಥವಾ 10 ದಿನಗಳ ಕಾರಾಗೃಹ ವಾಸ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ತನಿಖಾಧಿಕಾರಿಗಳಾಗಿ ಎಸ್ಸೈ ಸಂತೋಷ ಬಿ.ಪಿ. ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕರಾಗಿ ಪ್ರೀತಿ ಎಂ.ಸಿ. ವಾದ ಮಂಡಿಸಿದ್ದಾರೆ.


Spread the love

Exit mobile version