ಸುಹಾಸ್ ಶೆಟ್ಟಿ ಕೊಲೆಗೆ ಫಾಜಿಲ್ ತಮ್ಮನಿಂದ ಸಫ್ವಾನ್ ನ ತಂಡಕ್ಕೆ ರೂ 5 ಲಕ್ಷ ಫಡಿಂಗ್ – ಅನುಪಮ್ ಅಗರ್ವಾಲ್
ಮಂಗಳೂರು: ರೌಡಿ ಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಸಂಚು ಹೂಡಿದ್ದು, 5 ಲಕ್ಷ ಫಂಡಿಂಗ್ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತಾರಾದ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳಿದ್ದಾರೆ. ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ ಬಂಧಿತರು.
ಆರು ಜನರು ಸೇರಿಕೊಂಡು ಸುಹಾಸ್ ಶೆಟ್ಟಿ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್ ಆಗಿದ್ದು ಆತನ ಮೇಲೆ 2023ರಲ್ಲಿ ಮೇಲೆ ಮಾರಣಾಂತಿಕ ಹಲ್ಲೆಯಾಗಿರುತ್ತದೆ. ಈ ಹಲ್ಲೆಯನ್ನು ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್,ಧನರಾಜ್ ಹಲ್ಲೆ ಮಾಡಿದ್ದು, ಇದರಿಂದ ಸಫ್ವಾನ್ ಗೆ ಸುಹಾಸ್ ತನ್ನನ್ನು ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನಲೆ ಸುಹಾಸ್ ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ ಎಂದರು.
ಇದೇ ವೇಳೆ ಹತ್ಯೆಯಾಗಿದ್ದ ಫಾಝೀಲ್ ನ ತಮ್ಮನನ್ನು ಸಂಪರ್ಕಿಸಿ ಸುಹಾಸ್ ನ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ. ಸುಹಾಸ್ ಕೊಲೆಗೆ ಐದು ಲಕ್ಷ ರೂಪಾಯಿ ಫಾಜಿಲ್ನ ತಮ್ನ ಆದಿಲ್ ಸಫ್ವಾನ್ ನ ತಂಡಕ್ಕೆ ನೀಡುದಾಗಿ ಹೇಳಿರುತ್ತಾನೆ. ಅಲ್ಲದೆ ಅದಕ್ಕೆ ಮುಂಗಡವಾಗಿ ಮೂರು ಲಕ್ಷ ರೂಪಾಯಿ ನೀಡಿದ್ದು ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ರೆಡಿ ಮಾಡಿಕೊಳ್ಳುತ್ತಾನೆ. ನಿಯಾಜ್ ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್ ನ ನ್ನು ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ. ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅಗರ್ ವಾಲ್ ತಿಳಿಸಿದರು.
ಈ ಪ್ರಕರಣವನ್ನು ರಿವೇಂಜ್ ಅಂತಾ ಹೇಳೊಕೆ ಈಗ ಆಗಲ್ಲ ಕಾರಣ ಸಫ್ವಾನ್ ಗೂ ಸುಹಾಸ್ ನಿಂದ ಕೊಲೆ ಆಗುವ ಆತಂಕ ಇತ್ತು ಹಾಗಾಗಿ ಆದಿಲ್ ನ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ ಎಂದರು.
ಸುಹಾಸ್ ಶೆಟ್ಟಿ ಗೆ ಕೊಲೆಗೆ ಬುರ್ಖಾಧಾರಿ ಮಹಿಳೆ ಸಾಥ್ ನೀಡಿರೋ ವೀಡಿಯೋ ವೈರಲ್ ಕುರಿತು ಪ್ರತಿಕ್ರಿಯಿಸಿದ ಅಗರ್ವಾಲ್ ಅವರು ಆ ಇಬ್ಬರು ಮಹಿಳೆ ಕೊಲೆ ಆರೋಪಿ ನಿಯಾಜ್ ನ ಸಂಬಂಧಿಕರಾಗಿದ್ದು ಯಾವುದೋ ಕೆಲಸಕ್ಕೆ ಆ ಹೆಂಗಸು ಅಲ್ಲಿ ಬಂದಿರೋದು ಹೇಳಿದ್ದಾಳೆ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಕೊಲೆ ಆರೋಪಿಗಳು ಪಿಎಫ್ಐ ಕಾರ್ಯಕರ್ತರ ಬಗ್ಗೆ ಮಾಹಿತಿ ಇಲ್ಲ ಆದರೂ ಅವರ ಅವರ ಸೋಷಿಯಲ್ ಮಿಡಿಯಾ ತಪಾಸಣೆ ಮಾಡುತ್ತಿದ್ದೇವೆ. ಕೊಲೆ ನಡೆಸಲು ಆರೋಪಿಗಳು ಬಾಡಿಗೆಯಲ್ಲಿ ಆ ವಾಹನವನ್ನು ಪಡೆದುಕೊಂಡಿದ್ದರು ಎಂದು ಹೇಳಿದರು.