ಸುಹಾಸ್ ಶೆಟ್ಟಿ ಕೊಲೆ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಆರೋಪ – ಇಬ್ಬರ ವಿರುದ್ದ ಪ್ರಕರಣ
ಮಂಗಳೂರು: ನಗರದ ಬಜ್ಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಟ್ಟು 02 ಜನರನ್ನು ಪತ್ತೆ ಹಚ್ಚಿ ತನಿಖೆ ನಡೆಸಲಾಗಿದೆ.
1. ಕಾವೂರು ಪೊಲೀಸ್ ಠಾಣೆ
ಇನ್ ಸ್ಟಾ ಗ್ರಾಂನಲ್ಲಿ _dj_bharath_2008 ಎಂಬ ಇನ್ ಸ್ಟಾ ಗ್ರಾಂ ಖಾತೆಯಲ್ಲಿ “ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು ಆಗ ಮಾತ್ರ ಸುಹಾನ್ ಅಣ್ಣನ ಆತ್ಮಕ್ಕೆ ಶಾಂತಿಸಿಗುತ್ತೆ ನೆನಪಿಟ್ಟುಕೊಳ್ಳಿ” ಎಂಬುದಾಗಿ ಪೋಸ್ಟ್ ಮಾಡಿದ್ದು, ಸದ್ರಿ ಪೋಸ್ಟ್ ಗೆ ಲೈಕ್ ಮಾಡಿದ್ದ ಶರಣಪ್ಪ ಬಸವರಾಜ ಬಿಂಗಿ ಬಿಜೈ, ಮಂಗಳೂರು ಎಂಬುವವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದ್ದು ತನಿಖೆ ಮುಂದುವರೆಸಲಾಗಿದೆ.
2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆ
ಸಾರಾಂಶ: karaavali_official ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ “ಪ್ರತಿರೋಧ ಅಪರಾಧವಲ್ಲ ಮುಸ್ಲಿಮರು ನಪುಂಸಕರು ಅಲ್ಲ ನೆನಪಿರಲಿ ತಾನು ಯಾವ ಕಾರಣಕ್ಕೆ ಕೊಲೆಯಾದೆ ಅನ್ನೋ ಅರಿವಿಲ್ಲದೆ ಖಬುರ್ಸ್ತಾನಲ್ಲಿ ಮಲಗಿರೋ ಅಮಾಯಕ ಪಾಝಿಲ ನ ಕೊಲೆ ಮಾಡಿದ ಇವನ ಸಾವವನ್ನು ದುಃಖ …. Targe 6 Peace baki inshallah” ۵ ಸದ್ರಿ ಪೋಸ್ಟ್ ಗೆ ಲೈಕ್ ಮಾಡಿದ್ದ ಶಹನಾಜ್ ಬಜ್ಜೆ, ಮಂಗಳೂರು ಎಂಬಾತನನ್ನು ಪತ್ತೆ ಹಚ್ಚಿ ವಿಚಾರಣಿ ನಡೆಸಲಾಗುತ್ತಿದ್ದು, ತನಿಖೆ ಮುಂದುವರೆಸಲಾಗಿದೆ.