ಸೆ. 13: ದಿ. ಓಸ್ಕರ್ ಫೆರ್ನಾಂಡಿಸ್ ಸಂಸ್ಮರಣಾ ಕಾರ್ಯಕ್ರಮದ ಸ್ಪರ್ಧೆಗಳು ಹಾಗೂ ಸಮಾರೋಪ ಸಭೆ
ಉಡುಪಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಜನಪ್ರಿಯ ರಾಜಕಾರಣಿ ಹಾಗೂ ಯುವಜನತೆಯ ಕಣ್ಮಣಿ ದಿ. ಓಸ್ಕರ್ ಫೆರ್ನಾಂಡಿಸ್ ಅವರ ಸಂಸ್ಮರಣಾ ಅಂಗವಾಗಿ ವಿವಿಧ ಸ್ಪರ್ಧೆಗಳು ಆಯೋಜಿಸಿದ್ದು ಅದರ ಸಮಾರೋಪ ಸಮಾರಂಭ ಸೆಪ್ಟೆಂಬರ್ 13 ಶನಿವಾರ ಮಧ್ಯಾಹ್ನ ಬನ್ನಂಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಲಿದೆ.
ಸಪ್ಟೆಂಬರ್ 7 ರಂದು ನಡೆದ ಹಲವು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಉಳಿದ ಸ್ಪರ್ಧೆಗಳು ಶನಿವಾರ, 13-09-2025 ರಂದು ಬೆಳಿಗ್ಗೆ 8.30ರಿಂದ ನಡೆಯಲಿವೆ.
ಬೆಳಿಗ್ಗೆ 8.00 – ಸ್ಪರ್ಧಾಳುಗಳ ನೋಂದಣಿ ಆರಂಭವಾಗಲಿದೆ. 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗಾಗಿ ಛದ್ಮವೇಷ ಸ್ಪರ್ಧೆ (ವಿಷಯ: ಸ್ವಾತಂತ್ರ್ಯ ಹೋರಾಟಗಾರರು), 1st & 2nd PUC ವಿದ್ಯಾರ್ಥಿನಿಯರಿಗಾಗಿ ರಂಗೋಲಿ ರಚನಾ ಸ್ಪರ್ಧೆ, ಜಡೆ ಕಟ್ಟುವ ಸ್ಪರ್ಧೆ, 1st & 2nd PUC ಎಲ್ಲಾ ವಿದ್ಯಾರ್ಥಿಗಳಿಗಾಗಿ ನಮ್ಮ ಸಂವಿಧಾನ ಕುರಿತ ಭಾಷಣ ಸ್ಪರ್ಧೆಗಳು ನಡೆಯಲಿವೆ.
ಮಧ್ಯಾಹ್ನ 2.30ಕ್ಕೆ ದಿ. ಓಸ್ಕರ್ ಫೆರ್ನಾಂಡಿಸ್ ಅವರ ಸಂಸ್ಮರಣಾ ಸಮಾರಂಭದ ಸಮಾರೋಪ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಓಸ್ಕರ್ ಫೆರ್ನಾಂಡಿಸ್ ಅವರ ಧರ್ಮಪತ್ನಿ ಬ್ಲಾಸಮ್ ಫೆರ್ನಾಂಡಿಸ್ ಹಾಗೂ ಅವರ ಆಪ್ತರು ಉಪಸ್ಥಿತರಿರಲಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ಡಾ. ಎಂ. ವೀರಪ್ಪ ಮೊಯ್ಲಿ – ಮಾಜಿ ಮುಖ್ಯಮಂತ್ರಿ, ಕರ್ನಾಟಕ, ಪ್ರತಾಪಚಂದ್ರ ಶೆಟ್ಟಿ – ಮಾಜಿ ವಿಧಾನ ಪರಿಷತ್ ಸಭಾಧ್ಯಕ್ಷರು, ರಮಾನಾಥ ರೈ – ಮಾಜಿ ಸಚಿವರು, ಕರ್ನಾಟಕ, ಜಯಪ್ರಕಾಶ್ ಹೆಗ್ಡೆ – ಮಾಜಿ ಸಂಸದರು ಹಾಗೂ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರು, ಮಂಜುನಾಥ್ ಭಂಡಾರಿ – ಕೆಪಿಸಿಸಿ ಕಾರ್ಯಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು, ಐವನ್ ಡಿಸೋಜಾ – ವಿಧಾನ ಪರಿಷತ್ ಸದಸ್ಯರು, ವಿನಯ ಕುಮಾರ್ ಸೊರಕೆ – ಮಾಜಿ ಸಚಿವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು, ಹರೀಶ್ ಕುಮಾರ್ – ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಂಗಳೂರು; ಮಾಜಿ ವಿಧಾನ ಪರಿಷತ್ ಸದಸ್ಯರು, ಅಭಯಚಂದ್ರ ಜೈನ್ – ಮಾಜಿ ಸಚಿವರು, ಮಾಜಿ ಶಾಸಕರಾದ ಗೊಪಾಲ್ ಪೂಜಾರಿ, ಸುಕುಮಾರ ಶೆಟ್ಟಿ, ಜೆ.ಆರ್. ಲೊಬೊ, ಎಂ.ಎ. ಗಾಫೂರ್ – ಉಪಾಧ್ಯಕ್ಷರು, ಕೆಪಿಸಿಸಿ, ಮಿಥುನ್ ರೈ – ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ; ಉಡುಪಿ ಉಸ್ತುವಾರಿ, ಲಾವಣ್ಯಾ ಬಲ್ಲಾಳ್ – ಕೆಪಿಸಿಸಿ, ಅಶೋಕ್ ಕುಮಾರ್ ಕೊಡವೂರು – ಜಿಲ್ಲಾ ಅಧ್ಯಕ್ಷರು, ಉಡುಪಿ ಕಾಂಗ್ರೆಸ್, ಕಿಶನ್ ಹೆಗ್ಡೆ – ಕಾರ್ಯಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ , ಪ್ರಸಾದ ರಾಜ್ ಕಾಂಚನ್ ಮುಖಂಡರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಭಾಗವಹಿಸಲಿದ್ದಾರೆ.
ಓಸ್ಕರ್ ಫೆರ್ನಾಂಡಿಸ್ ಅವರು ಜನಮನದಲ್ಲಿ ಅಳಿಸಲಾಗದ ಗುರುತು ಬರೆದ ನಾಯಕರಾಗಿದ್ದು, ಅವರ ತ್ಯಾಗ, ಸೇವಾ ಮನೋಭಾವ ಹಾಗೂ ದೇಶಪ್ರೇಮವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷರಾದ ಯತೀಶ್ ಕರ್ಕೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.