ಸೈನಿಕರನ್ನು ಅವಮಾನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಡಿ – ಡಾ ಮೋಹನ್ ಆಳ್ವ

Spread the love

ಸೈನಿಕರನ್ನು ಅವಮಾನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಡಿ – ಡಾ ಮೋಹನ್ ಆಳ್ವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ದಿವಿನಾಯಕ ಪ್ರತಿಷ್ಟಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ರಾಷ್ಟ್ರ ರಕ್ಷಕರೊಂದಿಗೆ ಒಂದು ಸುಂದರ ಸಂಜೆ ಕಾರ್ಯಕ್ರಮ ನಗರದಲ್ಲಿ ನಡೆಯಿತು.

soliders-felicitation-bunts-mangalore-20160904-01 soliders-felicitation-bunts-mangalore-20160904-02 soliders-felicitation-bunts-mangalore-20160904-03

ರಾಷ್ಟ್ರ ರಕ್ಷಕರೊಂದಿಗೆ ಒಂದು ಸುಂದರ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವಾ ಅವರು ಸೈನಿಕರು ತಮ್ಮನ್ನು ಗೌರವಿಸಿ ಎಂದು ಯಾವತ್ತೂ ಕೇಳುವುದಿಲ್ಲ ಆದರೆ ಅವರನ್ನು ಅವಮಾನ ಮಾಡುವ ಮನಸ್ಥಿತಿಯನ್ನು ಯಾರೂ ಬೆಳೆಸಿಕೊಳ್ಳಬಾರದು. ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ಕರಾವಳಿಯಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ನಿಟ್ಟಿನಲ್ಲಿ ಜಾಗೃತಿ ನಡೆಯಿಬೇಕಿದೆ. ಭಾರತೀಯತೆ ಮತ್ತು ದೇಶ ರಕ್ಷಕರಿಗಾಗಿ ಮಿಡಿಯುವ ಮನಸ್ಸು ನಮ್ಮದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ 11 ಕ್ಕೂ ಅಧಿಕ ಮಂದಿ ಹಿರಿಯ ಯೋಧರನ್ನು ಸನ್ಮಾನಿಸಲಾಯಿತು. ವಾಗ್ಮಿ ನಿಕೇತ್ ರಾಜ್ ಸೈನಿಕರನ್ನು ಅಭಿನಂದಿಸಿ ಮಾತನಾಡಿದರು. ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಲೆ. ಕಮಾಂಡರ್ ಜಿ.ಪಿ. ಮಸ್ಕರೇನ್ಹಸ್, ಬ್ರಿಗೆಡಿಯರ್ ಐ ಎನ್ ರೈ, ಅವರು ಸನ್ಮಾನಿತರ ಪರವಾಗಿ ಮಾತನಾಡಿದರು.

soliders-felicitation-bunts-mangalore-20160904 soliders-felicitation-bunts-mangalore-20160904-00

ಕಾರ್ಯಕ್ರಮದಲ್ಲಿ ಶಾಸಕ ಮೋಯ್ದಿನ್ ಬಾವ, ಸಂಘದ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಖಜಾಂಚಿ ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ್ ಶೆಟ್ಟಿ, ಟ್ರಸ್ಟಿಗಳಾದ ಶೆಡ್ಡೆ ಮಣಜುನಾಥ ಭಂಡಾರಿ, ಕೆ ಪಿ ರೈ, ಬಾಲಕೃಷ್ಣ ಶೆಟ್ಟಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಡಾ ಆಶಾ ಜ್ಯೋತಿ ರೈ, ತಾಲೂಕು ಸಮಿತಿ ಸಂಚಾಲಕ ಉಮೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಪ್ರಸ್ತಾವನೆಗೈದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು. ದಿವಾಕರ ಸಾಮಾನಿ ವಂದಿಸಿದರು. ಬಿ ಶೇಖರ ಶೆಟ್ಟಿ, ಸುಕೇಶ್ ಚೌಟ ಪುರುಷೋತ್ತಮ ನಿರೂಪಿಸಿದರು.


Spread the love

2 Comments

  1. Dr.Mohana Alva is 100% right – There are certain groups and political parties who have no values or standards. As we all witnessed recently, these political parties and their vote banks support anti-India, anti-Indian Army agenda by separatist groups.

Comments are closed.