ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಮುಸ್ಲಿಂ ಸಂಘಟನೆಗಳು ಬಂದ್ ಮುಂದುವರೆಸಲಿ : ಯಶ್ಪಾಲ್ ಸುವರ್ಣ ಆಕ್ರೋಶ

Spread the love

ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಮುಸ್ಲಿಂ ಸಂಘಟನೆಗಳು ಬಂದ್ ಮುಂದುವರೆಸಲಿ : ಯಶ್ಪಾಲ್ ಸುವರ್ಣ ಆಕ್ರೋಶ

ಉಡುಪಿ: ಹಿಜಾಬ್ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಬಂದ್ ಬೆಂಬಲಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ನ್ಯಾಯಾಂಗ ನಿಂದನೆ ಮಾಡಿರುವ ಅಂಗಡಿ ಮಾಲೀಕರು ಸುಪ್ರೀಂಕೋರ್ಟ್ ತೀರ್ಪಿನವರೆಗೂ ಬಂದ್ ಮುಂದುವರೆಸಲಿ ಎಂದು ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನಾತ್ಮಕ ತಳಹದಿಯಲ್ಲಿ ರಾಜ್ಯದ ಹೈಕೋರ್ಟ್ ತ್ರಿಸದಸ್ಯ ಪೀಠದ ಹಿಜಾಬ್ ಪ್ರಕರಣದ ತೀರ್ಪನ್ನು ಬಹಿರಂಗವಾಗಿ ವಿರೋಧಿಸಿ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡುವ ಮೂಲಕ ಭಾರತದ ಕಾನೂನಿಗೆ ತಲೆಬಾಗುವುದಿಲ್ಲ ಎಂದು ಉದ್ಧಟತನ ಮೆರೆಯುವ ಮೂಲಕ ರಾಷ್ಟ್ರ ವಿರೋಧಿಗಳ ಮುಖವಾಡ ಸಮಾಜದ ಮುಂದೆ ಕಳಚಿಬಿದ್ದಿದೆ.

ಹಿಜಾಬ್ ವಿವಾದದ ಮೂಲಕ ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಶಾಂತಿ ಸುವ್ಯವಸ್ಥೆ ಹದಗೆಡಿಸುವ ನಿಟ್ಟಿನಲ್ಲಿ ಮತಾಂಧ ಶಕ್ತಿಗಳ ಪ್ರಯತ್ನಕ್ಕೆ ಹೈಕೋರ್ಟ್ ತೀರ್ಪು ತಡೆಯೊಡ್ಡಿದ್ದು, ಇದರಿಂದ ಭ್ರಮನಿರಸನಗೊಂಡು ಮತೀಯವಾದಿಗಳು ಬಂದ್ ಕರೆ ನೀಡಿದ್ದಾರೆ.

ಈ ಮತಾಂಧ ರಾಷ್ಟ್ರ ವಿರೋಧಿಗಳ ಬಗ್ಗೆ ಬಹುಸಂಖ್ಯಾತ ಹಿಂದೂ ಸಮಾಜ ಜಾಗೃತೆ ವಹಿಸಿ, ಈ ಮನಸ್ಥಿತಿಯವರೊಂದಿಗೆ ಆರ್ಥಿಕ ವ್ಯವಹಾರಗಳನ್ನು ನಿರ್ಬಂಧಿಸಿ ತಕ್ಕ ಉತ್ತರ ನೀಡುವ ಸಮಯ ಬಂದಿದೆ.

ಈ ನೆಲದ ಕಾನೂನಿಗೆ ಆಗೌರವ ತೋರುವ ಮೂಲಕ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಘಾಸಿ ಮಾಡುವವರಿಗೆ ಹಿಂದೂ ದೇಗುಲ ಮಂದಿರಗಳ ಧಾರ್ಮಿಕ ಸಮಾರಂಭಗಳಲ್ಲೂ ವ್ಯಾಪಾರ ವ್ಯವಹಾರ ಬಹಿಷ್ಕರಿಸಲು ಸಮಸ್ತ ಹಿಂದೂ ಸಮಾಜ ಮುಂದಾಗುವ ಕಾಲ ನಿರ್ಮಾಣವಾಗಿದ್ದು ಈ ಮೂಲಕ ಮತಾಂಧರಿಗೆ ದಿಟ್ಟ ಉತ್ತರ ನೀಡಲು ಸಾಧ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

1 Comment

Comments are closed.