Home Mangalorean News Kannada News ಹಿರಿಯಡ್ಕ ಚಿನ್ನದ ವ್ಯಾಪಾರಿ ದರೋಡೆ ; ಏಳು ಆರೋಪಿಗಳ ಬಂಧನ

ಹಿರಿಯಡ್ಕ ಚಿನ್ನದ ವ್ಯಾಪಾರಿ ದರೋಡೆ ; ಏಳು ಆರೋಪಿಗಳ ಬಂಧನ

Spread the love

ಹಿರಿಯಡ್ಕ ಚಿನ್ನದ ವ್ಯಾಪಾರಿ ದರೋಡೆ ; ಏಳು ಆರೋಪಿಗಳ ಬಂಧನ

ಉಡುಪಿ: ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಭಧಿಸಿ ಡಿಸಿಐಬಿ ಪೋಲಿಸರು  7 ಮಂದಿ ಆರೋಪಿಗಳನ್ನು ಬಂದಿಸಿದ್ದಾರೆ.

ಬಂಧಿತರನ್ನು ಪೆರ್ಡೂರು ಸಮೀಪದ ಹರಿಖಂಡಿಗೆ ನಿವಾಸಿ ಹರಿಕೃಷ್ಣ ಭಟ್ (25), ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ (ಮಹ್ಮದ್ ಇರ್ಫಾನ್ (30), ಕೊಡವೂರು ಮಲ್ಪೆಯ ಜಾವೇದ್ (25), ಬೆಳಪು ನಿವಾಸಿ ಅಶ್ರಫ್ (34), ಮಜೂರು ನಿವಾಸಿ ಇಲಾಹಿತ್ (24), ಕುಂದಾಪುರ ತಾಲೂಕು ಕೆರ್ಗಲ್ ನಿವಾಸಿ ರವಿಚಂದ್ರ (41), ಹಾಗೂ ಕಿರಿಮಂಜೇಶ್ವರ ನಿವಾಸಿ ಸುಮಂತ ಕುಮಾರು (24) ಎಂದು ಗುರುತಿಸಲಾಗಿದೆ.

ಬಂಧೀತರಿಂದ 876 ಗ್ರಾಮ್ ತೂಕದ ಚಿನ್ನಾಭರಣ, 60000 ನಗದು, 2 ರಿಟ್ಜ್ ಕಾರು ಮತ್ತು 1 ಚೆರ್ವಲೆಟ್ ಸಿಲ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 17 ರಂದು ಕೇರಳ ತ್ರಿಶೂರ್‌ನ  ದಿಲೀಪ್ ಟಿ.ಡಿ ಎಂಬವರು ಚಿನ್ನಾಭರಣ ಹಾಗೂ ನಗದು ಹಣ ತೆಗೆದುಕೊಂಡು ಹಿರಿಯಡ್ಕದಲ್ಲಿ ಬಸ್ ಹತ್ತಿ ಉಡುಪಿ ಕಡೆಗೆ ಬಸ್ಸಿನಲ್ಲಿ ಹೋಗುತ್ತಿರುವಾಗ ಆರೋಪಿಗಳು ಬಸ್ಸಿನಲ್ಲಿ ಹಿಂಬಾಲಿಸಿ ಕೊಂಡು ಬಂದು ಮಣಿಪಾಲ ಡೌನ್‌ಟೌನ್‌ ಬಾರ್‌ ಬಳಿ ಬಸ್ಸಿನಿಂದ ಇಳಿಸಿ ಪಿಸ್ತೂಲ್‌ ತೋರಿಸಿ ಬಲವಂತದಿಂದ ಕಾರಿನಲ್ಲಿ ಹಾಕಿ ಅಪಹರಣ ಮಾಡಿಕೊಂಡು ಹೋಗಿ ಸುಮಾರು 1500 ಗ್ರಾಂ ಚಿನ್ನಾಭರಣ ಹಾಗೂ ನಗದು ರೂ. 2,57,200/- ರೂಪಾಯಿಯನ್ನು ದರೋಡೆ ಮಾಡಿಕೊಂಡು ನಂದಿಕೂರು ಎಂಬಲ್ಲಿ ಬಿಟ್ಟು ಹೋಗಿರುತ್ತಾರೆ ಎಂಬುದಾಗಿ ದೂರು ನೀಡಿದ್ದು . ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

ಈ ಕುರಿತಂತೆ ಪಿರ್ಯಾದುದಾರರಾದ ದಿಲೀಪ್ ರವರನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ, ದಿಲೀಪ್‌ ರವರು ತ್ರಿಶೂರ್‌ ನಗರದಿಂದ ಮಂಗಳೂರು,ಮೂಡಬಿದ್ರಿ, ಕಾರ್ಕಳ, ಉಡುಪಿ, ಪೆರ್ಡೂರು ಮುಂತಾದ ಕಡೆಗಳಲ್ಲಿ ಇರುವಂತಹ ಚಿನ್ನದ ಅಂಗಡಿಗಳಿಗೆ ಚಿನ್ನದ ಆಭರಣಗಳನ್ನುಸರಬರಾಜು ಮಾಡಿ,ಅವರಿಂದ ನಗದು ಪಡೆದು ಹಿಂದಿರುಗುವ ವ್ಯಾಪಾರವನ್ನು ಹಲವಾರು ವರ್ಷಗಳಿಂದ ನಡೆಸುತ್ತಿರುವುದು ತಿಳಿದುಬಂದಿರುತ್ತದೆ.

ಈ ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ ಪ್ರಕರಣವಾಗಿದ್ದು ಜಿಲ್ಲಾ ಪೊಲೀಸ್‌ ವತಿಯಿಂದ 5 ತಂಡಗಳನ್ನುರಚನೆ ಮಾಡಿ  ಆರೋಪಿ ಹಾಗೂ ಸೊತ್ತು ಪತ್ತೆಗಾಗಿ ವಿವಿಧ ಕೆಲಸಗಳಲ್ಲಿ ನೇಮಕ ಮಾಡಲಾಗಿರುತ್ತದೆ.  ತನಿಖಾ ಕಾಲದಲ್ಲಿ ಹೆಚ್ಚಿನ ವಿಚಾರಣೆಯಿಂದ ಈ ಪ್ರಕರಣದಲ್ಲಿ ನಡೆದಂತಹ ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಲಾಗಿರುತ್ತದೆ. ಇಂತಹ ಹಲವಾರು ವ್ಯಾಪಾರಿಗಳು ಕೇರಳ ರಾಜ್ಯದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಚಿನ್ನದ ಅಂಗಡಿಗಳಿಗೆ ಆಭರಣಗಳನ್ನು ಸರಬರಾಜು ಮಾಡಿ ಹಣ ಪಡೆಯುವ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಇಂತಹ ವ್ಯಾಪಾರ ಕಾನೂನ ಬದ್ದವಾಗಿರುವ ಬಗ್ಗೆ ಈಗಾಗಲೇ ದಾಖಲೆಗಳನ್ನು ಸಲ್ಲಿಸುವಂತೆ ಪಿರ್ಯಾದುದಾರರು ಮತ್ತು ಇತರ ಸಂಬಂಧಪಟ್ಟವರಿಗೆ ತನಿಖಾಧಿಕಾರಿಯವರು ಸೂಚನೆ ನೀಡಿರುತ್ತಾರೆ. ಸದ್ರಿ ಪ್ರಕ್ರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ತಂಡದ ವತಿಯಿಂದ 7 ಜನರ ತಂಡವನ್ನು ದಸ್ತಗಿರಿ ಮಾಡಿ ಅವರಿಂದ ದರೋಡೆ ಮಾಡಿದ್ದ 876 ಗ್ರಾಂ ತೂಕದ 24,00,000 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು 60,000 ಹಾಗೂ ಕೃತ್ಯಕ್ಕೆ ಬಳಸಿದ 2 ರಿಟ್ಜ್‌ ಹಾಗೂ 1ಚೆವರ್ಲೆಟ್‌ ಸೀಲ್‌ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇತರ ಆರೋಪಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.

ಈ ಪ್ರಕರಣದ ಪ್ರಮುಖ ಆರೋಪಿ ಹರಿಕೃಷ್ಣ ಭಟ್, ಪ್ರಾಯ: 25 ವರ್ಷ ಎಂಬವನು ಪೆರ್ಡೂರಿನಲ್ಲಿ ಗಾಯತ್ರಿ ಜ್ಯುವೆಲ್ಲರಿ ಅಂಗಡಿ ಹೊಂದಿದ್ದು, ಪ್ರಕರಣದ ಫಿರ್ಯಾದಿದಾರರಾದ ದಿಲೀಪ್ ಎಂಬವರು ಈತನ ಅಂಗಡಿಗೆ ಚಿನ್ನಾಭರಣ ಮಾರಾಟ ಮಾಡಲು ಬರುತ್ತಿದ್ದರು. ಹರಿಕೃಷ್ಣ ಭಟ್‌ನಿಗೆ ದಿಲೀಪರವರು ಚಿನ್ನಾಭರಣ ಹಾಗೂ ಚಿನ್ನಾಭರಣ ಮಾರಾಟ ಮಾಡಿದ ನಗದು ಹಣ ತೆಗೆದುಕೊಂಡು ಒಬ್ಬರೇ ಹೋಗುವ ವಿಚಾರ ಗೊತ್ತಿದ್ದು, ಇತರ ಆರೋಪಿಗಳೊಂದಿಗೆ ಸೇರಿಕೊಂಡು ದಿಲೀಪ್‌ರವರನ್ನು ದರೋಡೆ ಮಾಡುವ ಬಗ್ಗೆ ಸಂಚು ರೂಪಿಸಿ, ಇತರ ಆರೋಪಿಗಳಿಂದ ದರೋಡೆ ಮಾಡಿಸಿರುತ್ತಾನೆ.

ಈ ಪ್ರಕರಣದ 2 ನೇ ಆರೋಪಿ ಮಹ್ಮದ್ ಇರ್ಫಾನ್ @ ಇರ್ಫಾನ್ ಪ್ರಾಯ: 30 ವರ್ಷ, ತಂದೆ: ಹೆಚ್. ಮಹ್ಮದ್ ಸಾಹೇಬ್, ವಾಸ: ರುಮೇಜಾ ಮಂಜಿಲ್, ಸಂತೋಷ ನಗರ, ಹೆಮ್ಮಾಡಿ ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು  ಎಂಬವನು ಇತರ ಆರೋಪಿಗಳಾದ  ಕೊಡವೂರು ಮಲ್ಪೆಯ ಜಾವೇದ್ (25), ಬೆಳಪು ನಿವಾಸಿ ಅಶ್ರಫ್ (34), ಮಜೂರು ನಿವಾಸಿ ಇಲಾಹಿತ್ (24), ಕುಂದಾಪುರ ತಾಲೂಕು ಕೆರ್ಗಲ್ ನಿವಾಸಿ ರವಿಚಂದ್ರ (41), ಹಾಗೂ ಕಿರಿಮಂಜೇಶ್ವರ ನಿವಾಸಿ ಸುಮಂತ ಕುಮಾರು (24) ದಿಲೀಪರವರಿಗೆ ಹೆದರಿಸಿ ಮಣಿಪಾಲ ಡೌನ್‌ಟೌನ್‌ ಬಾರ್‌ ಬಳಿ ಬಸ್ಸಿನಿಂದ ಇಳಿಸಿ ಬಲವಂತವಾಗಿ ಆರೋಪಿ ಇರ್ಫಾನ್‌ ತಂದಿದ್ದ ಕಾರಿನಲ್ಲಿ ಕುಳ್ಳಿರಿಸಿ ಅಪಹರಣ ಮಾಡಿಕೊಂಡು ಹೋಗಿ ದರೋಡೆ ಮಾಡಿರುತ್ತಾರೆ. ಆರೋಪಿ ಇಲಾಹಿದ್ ನೈಜ ಪಿಸ್ತೂಲ್ ನಂತೆ ಇರುವ ಆಟಿಕೆಯ ಪಿಸ್ತೂಲ್ ನ್ನು ದಿಲೀಪರವರಿಗೆ ತೋರಿಸಿ ಪೊಲೀಸ್ ಎಂಬುದಾಗಿ ಹೆದರಿಸಿರುತ್ತಾನೆ.

           ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಟಿ. ಬಾಲಕೃಷ್ಣ ಐಪಿಎಸ್ ರವರ ನಿರ್ದೇಶನದಲ್ಲಿ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್ ವಿಷ್ಣುವರ್ಧನ, ಕೆಎಸ್‌ಪಿಎಸ್ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.ಜೆ ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ ಘಟಕದ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಎ, ಶ್ರೀ ಶ್ರೀಕಾಂತ್‌, ಸಿಪಿಐ ಬ್ರಹ್ಮಾವರ ವೃತ್ತ, ಶ್ರೀ ವಿ.ಎಸ್‌. ಹಾಲಮೂರ್ತಿ, ಸಿಪಿಐ ಕಾಪು ವೃತ್ತ, ಶ್ರೀ ವಿನಾಯಕ ಬಿಲ್ಲವ, ಪಿಎಸ್‌ಐ ಹಿರಿಯಡ್ಕ ಠಾಣೆ, ಶ್ರೀ ಸತೀಶ್, ಪಿಎಸ್‌ಐ ಪಡುಬಿದ್ರಿ ಠಾಣೆ, ರವರು ನಡೆಸಿರುತ್ತಾರೆ. ಶ್ರೀ ಶ್ರೀಧರ ನಂಬಿಯಾರ್‌ , ಎಎಸ್‌ಐ,ಕಾಪು ಠಾಣೆ, ಡಿಸಿಐಬಿ ಘಟಕದ ಎ.ಎಸ್.ಐ. ರೊಸಾರಿಯೊ ಡಿ’ಸೋಜ ಮತ್ತು ಸಿಬ್ಬಂದಿಯವರಾದ ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ. ಕೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ, ರಾಜ್‌ಕುಮಾರ್ ಬೈಂದೂರು, ದಯಾನಂದ ಪ್ರಭು, ಚಾಲಕ ರಾಘವೇಂದ್ರ, ಆರ್‌ಡಿಸಿ ವಿಭಾಗದ ಶಿವಾನಂದ ಶೆಟ್ಟಿ, ನಿತಿನ್‌, ದಿನೇಶ  ರವರು ಸಹಕರಿಸಿರುತ್ತಾರೆ.

            ಈ ಕುರಿತಂತೆ ಪಶ್ಚಿಮ ವಲಯ ಪೊಲೀಸ್‌ ಮಹಾನಿರೀಕ್ಷಕರಾದ ಶ್ರೀ ಹರಿಶೇಖರನ್‌, ಐಪಿಎಸ್‌ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸದ್ರಿ ತಂಡಕ್ಕೆ ನಗದು ಬಹುಮಾನ ಘೋಷಿಸಿರುತ್ತಾರೆ.


Spread the love

Exit mobile version