Home Mangalorean News Kannada News ಹಿರಿಯ ವಿದ್ಯಾರ್ಥಿಗಳಿಂದ ರ್ಯಾಂಗಿಂಗ್ – 10 ಮಂದಿ ಬಂಧನ

ಹಿರಿಯ ವಿದ್ಯಾರ್ಥಿಗಳಿಂದ ರ್ಯಾಂಗಿಂಗ್ – 10 ಮಂದಿ ಬಂಧನ

Spread the love

ಹಿರಿಯ ವಿದ್ಯಾರ್ಥಿಗಳಿಂದ ರ್ಯಾಂಗಿಂಗ್ – 10 ಮಂದಿ ಬಂಧನ

ಸುಳ್ಯ : ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಕಿರುಕುಳ ಪ್ರಕರಣಕ್ಕೆ ಸಂಬಂಧೀಸಿದಂತೆ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ 10 ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ವಿದ್ಯಾರ್ಥಿಗಳನ್ನು ಕೃಷ್ಣಕುಮಾರ, ನೀರಜ್, ಅಮಲ್, ಕಣ್ಣನ್, ಪರ್ಹಾನ್ ಮಹಮ್ಮದ್, ಸಂಜಯ್ ಕೃಷ್ಣನ್, ಏಬಲ್, ಜತಿನ್ ಬೋಷ್, ವಾಸಿಂ, ನಿಬಿನ್ ರಹೀಂ ಎಂದು ಗುರುತಿಸಲಾಗಿದೆ.

ಹಿರಿಯ ವಿದ್ಯಾರ್ಥಿಗಳ ಕಿರುಕಳ ಆರೋಪದ ಮೇರೆಗೆ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ನಿಶಾಂತ್ ಸುಳ್ಯ ಠಾಣೆಗೆ ದೂರು ನೀಡಿದ್ದನು.

ಆರೋಪಿ ವಿದ್ಯಾರ್ಥಿಗಳಾದ ಕಸಬಾ ಗ್ರಾಮದ ಕಣ್ಣನ್ ಅವರ ರೂಮಿಗೆ ಸಂತ್ರಸ್ತ ವಿದ್ಯಾರ್ಥಿ ನಿಶಾಂತ್ ಮತ್ತು ಅವನ ಸಹಪಾಠಿಗಳನ್ನು ಕರೆಸಿಕೊಂಡು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಕೊಡುವುದನ್ನು ಹೇಳಿ ಕೊಡಬೇಕಾ? ಎಂಬಂತಹ ಮಾತುಗಳ ಮೂಲಕ ನಿಂದಿಸಿರುವುದಾಗಿ ಉಲ್ಲೇಖಿಸಲಾಗಿದೆ.


Spread the love

Exit mobile version