Home Mangalorean News Kannada News ಹೃದಯಾಘಾತದಿಂದ 23 ವರ್ಷದ ಧರ್ಮಭಗಿನಿ ನಿಧನ

ಹೃದಯಾಘಾತದಿಂದ 23 ವರ್ಷದ ಧರ್ಮಭಗಿನಿ ನಿಧನ

Spread the love

ಹೃದಯಾಘಾತದಿಂದ 23 ವರ್ಷದ ಧರ್ಮಭಗಿನಿ ನಿಧನ

ಮಂಗಳೂರು: ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆ ಸೇರಿದ 23 ವರ್ಷ ಹರೆಯದ ಧರ್ಮಭಗಿನಿಯೋರ್ವರು ಹೃದಯಾಘಾತದಿಂದ ಮೃತರಾದ ಘಟನೆ ನಡೆದಿದೆ.

ಮೃತರನ್ನು ಬಿಜೈ ಕಾನ್ವೆಂಟಿನ ಸಿಸ್ಟರ್ ರೇಶ್ಮಾ ಡಿಸೋಜಾ(23) ಎಂದು ಗುರುತಿಸಲಾಗಿದೆ.

ಮೃತರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ ಎ ವ್ಯಾಸಂಗ ಮಾಡುತ್ತಿದ್ದರು.

ಸೋಮವಾರ ಬೆಳಿಗ್ಗಿನ ಜಾವ ರೇಶ್ಮಾ ಅವರು ಪೂಜೆ ಹಾಜರಾಗದೆ ಇರುವುದನ್ನು ಗಮನಿಸಿ ಇತರ ಧರ್ಮಭಗಿನಿಯರು ಸಿಸ್ಟರ್ ರೇಶ್ಮಾರ ಕೋಣೆಗೆ ತೆರಳಿ ನೋಡಿದಾಗ ಅವರು ಬೆಡ್ ಮೇಲೆ ಮಲಗಿರುವುದು ಕಂಡು ಬಂದು ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಇದ್ದಿರಲಿಲ್ಲ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಹೃದಯಾಘಾತವಾಗಿ ಮೃತಪಟ್ಟಿರುವುದು ತಿಳಿದು ಬಂದಿದೆ.


Spread the love

Exit mobile version