ಹೆಜಮಾಡಿ: ನೇಮೋತ್ಸವದಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ ಮಾಡಿದ ಮೂವರು ಮಹಿಳೆಯರ ಬಂಧನ
ಉಡುಪಿ: ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ದೆಯ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಮಹಿಳೆಯರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡು ಕೃಷ್ಣಗಿರಿ ನಿವಾಸಿಗಳಾದ ಶೀತಲ್, ಕಾಳಿಯಮ್ಮ ಮತ್ತು ಮಾರಿ ಎಂದು ಗುರುತಿಸಲಾಗಿದೆ.
ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ನಡೆಯುತ್ತಿದ್ದ ವೇಳೆ ಮೂವರು ಮಹಿಳೆಯರು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಕದ್ದಿದ್ದಾರೆ. ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಪೂಜೆಯ ವೇಳೆ ಮೂರು ಕಡೆಯಿಂದ ಸುತ್ತುವರಿದ ಕಳ್ಳಿಯರು ಗಂಟೆ ಹೊಡೆಯುವ ನೆಪದಲ್ಲಿ ಚಿನ್ನದ ಸರವನ್ನು ಕಳ್ಳತನ ಮಾಡಿದ್ದರು. ಸರದ ಮೌಲ್ಯ ಸುಮಾರು 2 ಲಕ್ಷ ರೂಗಳಾಗಿದೆ ಎನ್ನಲಾಗಿದೆ. ಮೂವರು ಮಹಿಳೆಯರು ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿ ಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು.
ಸಿಸಿ ಟಿವಿ ದ್ರಶ್ಯದ ಆಧಾರದಲ್ಲಿ ಪಡುಬಿದ್ರೆ ಪೊಲೀಸರು ಮೂವರು ಮಹಿಳೆಯರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.