Home Mangalorean News Kannada News ಹೊಸ 16 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಪೊಲೀಸ್, ಜಿಪಂ ಸಿಬಂದಿ ಸೇರಿ ಒಂದೇ ದಿನ 32 ಕೋರೊನಾ ಪಾಸಿಟಿವ್

ಹೊಸ 16 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಪೊಲೀಸ್, ಜಿಪಂ ಸಿಬಂದಿ ಸೇರಿ ಒಂದೇ ದಿನ 32 ಕೋರೊನಾ ಪಾಸಿಟಿವ್

Spread the love

ಹೊಸ 16 ಪ್ರಕರಣಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಪೊಲೀಸ್, ಜಿಪಂ ಸಿಬಂದಿ ಸೇರಿ ಒಂದೇ ದಿನ 32 ಕೋರೊನಾ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಕೋರೊನಾ ಆರ್ಭಟ ಮುಂದುವರೆದಿದ್ದು ಸಂಜೆ ಮತ್ತೆ 16 ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಒಟ್ಟು ಒಂದೇ ದಿನ ಜಿಲ್ಲೆಯಲ್ಲಿ 32 ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.

ಸಂಜೆಯ ಹೆಲ್ತ್ ಬುಲೆಟಿನ್ ಪ್ರಕಾರ ಇಬ್ಬರು ಮಕ್ಕಳು ಹತ್ತು ಗಂಡು ಮತ್ತು ನಾಲ್ವರು ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಸೋಂಕು ಪತ್ತೆಯಾಗಿದ್ದು, ಕಂಟೈನ್ ಮೆಂಟ್ ಝೋನ್ ಸಂಪರ್ಕದಲ್ಲಿ ಓರ್ವನಿಗೆ ಸೋಂಕು ಕಾಣಿಸಿಕೊಂಡರೆ ಶೀತ ಜ್ವರ ಬಾಧೆಯಿಂದ ದಾಖಲಾದ ಓರ್ವ ನಿಗೂ ಕೂಡ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಬಂದವರಾದರೆ ಒರ್ವ ಮಹಿಳೆಗೆ ಪೇಶಂಟ್ ನಂಬರ್ 1435 ಸಂಪರ್ಕದಿಂದ ಹಾಗೂ ಮತ್ತೊಬ್ಬರಿಗೆ ಪೇಶೆಂಟ್ ನಂಬರ್ 1435 ಮುಂಬೈ ಸಂಪರ್ಕದಿಂದ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಜಿಲ್ಲೆಯಲ್ಲಿ ಸೋಮವಾರದ 32 ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 108 ಕ್ಕೇರಿದೆ


Spread the love

Exit mobile version