17 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಜೇಸನ್ ಪೀಟರ್ ಬಂಧನ

Spread the love

17 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಜೇಸನ್ ಪೀಟರ್ ಬಂಧನ

ಮಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣಾ ಅಕ್ರ ನಂ.08/2007 U/S 420 IPC ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ಮೇರಮಜಲು ನಿವಾಸಿ ಜೇಸನ್ ಪೀಟರ್ ಡಿಸೋಜಾ (42) ಎಂದು ಗುರುತಿಸಲಾಗಿದೆ.

ಆರೋಪಿ ಜೇಸನ್ 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದು, ಪ್ರಕರಣವನ್ನು ನ್ಯಾಯಾಲಯವ LPC ಪ್ರಕರಣವೆಂದು ಪರಿಗಣಿಸಿರುತ್ತದೆ.

LPC ವಾರಂಟ್ ಆಸಾಮಿಯನ್ನು ಬಂಧಿಸುವಲ್ಲಿ ಕೇಂದ್ರ ವಿಭಾಗ ಎಸಿಪಿಯವರಾದ ಮಹೇಶ್ ಕುಮಾರ್ ರವರ ನಿರ್ದೇಶನದಂತೆ ಉತ್ತರ ಪೋಲಿಸ್ ಠಾಣೆಯ ನಿರೀಕ್ಷಕರಾದ ರಾಘವೇಂದ್ರ ಎಂ ಬೈಂದೂರ್ ರವರ ಮಾರ್ಗದರ್ಶನದಂತೆ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಪಿಎಸ್, ಪುನೀತ್ ಗಾಂವಕರ್, ಪಿಸಿ 2405 ತಿಪ್ಪರಪ್ಪ ಹಾಗೂ ಪಿಸಿ 3264 ಗುರು ಬಿ.ಟಿ ರವರು ಯಶಸ್ವಿಯಾಗಿರುತ್ತಾರೆ

ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರು ಮಂಗಳೂರು ನಗರ ಕುಲದೀಪ್ ಕುಮಾರ್ ಜೈನ್ ಪ್ರಶಂಶಿಸಿರುತ್ತಾರೆ.


Spread the love