Home Mangalorean News Kannada News 19ನೇ ಫೆಡರೇಶನ್ ಕಪ್ : ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಆರ್ಮಿ ಪಾಲು

19ನೇ ಫೆಡರೇಶನ್ ಕಪ್ : ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಆರ್ಮಿ ಪಾಲು

Spread the love

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟವು ಸೋಮವಾರ ಕೊನೆಗೊಂಡಿದ್ದು ಕ್ರೀಡಾ ಕೂಟದ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಆರ್ಮಿ ತಂಡವು ಪಡೆದುಕೊಂಡಿದೆ.

ತಮಿಳುನಾಡು ಕ್ರೀಡಾ ಕೂಟದ ಸಮಗ್ರ ಚಾಂಪಿಯನ್ಶಿಪ್ನ ದ್ವೀತಿಯ ಸ್ಥಾನವನ್ನು ಗೆದ್ದುಕೊಂಡಿದೆ. ಪ್ರತ್ಯೇಕ ಪುರುಷರ ವಿಭಾಗದಲ್ಲೂ ಆರ್ಮಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ತಮಿಳುನಾಡು ದ್ವೀತಿಯ ಸ್ಥಾನವನ್ನು ಪಡೆದಿದೆ. ಮಹಿಳೆಯ ವಿಭಾಗದ ಪಂದ್ಯಾಟದಲ್ಲಿ ಕೇರಳವು ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ದ್ವೀತಿಯ ಸ್ಥಾನವನ್ನು ಪಡೆದಿದೆ.

ಇನ್ನು ಕ್ರೀಡಾಕೂಟದ ಉತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಹರ್ಯಾಣದ ಇಂದ್ರಜಿತ್ ಅವರು ಶಾಟ್ಪೊಟ್ನಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಪಡೆದಿದ್ದಾರೆ. ಮಹಿಳಾ ವಿಭಾಗದಲ್ಲಿ ಓಡಿಸ್ಸಾದ ಸ್ರಾಬಾನಿ ನಂದ 100ಮೀ ಓಟದಲ್ಲಿನ ಉತ್ತಮ ಪ್ರದರ್ಶನಕ್ಕೆ ಉತ್ತಮ ಕ್ರೀಡಾಪಟು ಪ್ರಶಸ್ತಿ ಪಡೆದಿದ್ದಾರೆ.


Spread the love

Exit mobile version