2 ವರ್ಷದ ಜನ್ಮಜಾತ ಕಿವುಡುತನವುಳ್ಳ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

Spread the love

2 ವರ್ಷದ ಜನ್ಮಜಾತ ಕಿವುಡುತನವುಳ್ಳ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರಿನ ಇಎನ್ಟಿ ವಿಭಾಗವು ಕರ್ನಾಟಕ ಸರ್ಕಾರದ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯಡಿಯಲ್ಲಿ ಮೊದಲನೇ ಬಾರಿ 2 ವರ್ಷದ ಜನ್ಮಜಾತ ಕಿವುಡುತನವುಳ್ಳ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು.

ಡಾ. ದೀಕ್ಷಿತ್ ರಾಜಮೋಹನ್, ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್, ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ಸಿಐ ಶಸ್ತ್ರಚಿಕಿತ್ಸಕ ಡಾ. ರಮೇಶ್ ಕೌಲ್ಗುಡ್ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರಚಿಕಿತ್ಸೆಯ ನಂತರ ಕಾಕ್ಲಿಯರ್ ಇಂಪ್ಲಾಂಟ್ ‘ಸ್ವಿಚ್-ಆನ್’ ಕಾರ್ಯಕ್ರಮವನ್ನುಕುಮಾರಿ. ನಿಮಲ್ಕಾ, ಸಹಾಯಕ ಪ್ರಾಧ್ಯಾಪಕಿ, ಮತ್ತು ಶ್ರೀಮತಿ ಶ್ವೇತಾ ಪ್ರಭು, ಸಹಪ್ರಾಧ್ಯಾಪಕಿ ಆಸ್ಪತ್ರೆ ಆಡಿಯೋಲಾಜಿಸ್ಟ್ಸ್ ತಂಡವು ಡಾ.ಜಯಶ್ರೀ ಭಟ್, ಪ್ರಾಧ್ಯಾಪಕಿ, ವಾಕ್-ಶ್ರವಣ ವಿಭಾಗದ ಮಾರ್ಗದರ್ಶನದಲ್ಲಿ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಗಂಗಾಧರ ಸೋಮಯಾಜಿ ರಿಜಿಸ್ಟ್ರಾರ್ ಯೆನಪೋಯ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ಡಾ. ಎಂ.ಎಸ್.ಮೂಸಬ್ಬ ಪ್ರಾಂಶುಪಾಲರು, ಡಾ.ಹಬೀಬ್ ರಹಮಾನ್ ವೈದ್ಯಕೀಯ ಅಧೀಕ್ಷಕರು ಮತ್ತು ಡಾ. ಸಾಯಿಮನೋಹರ್, ಇಎನ್ಟಿ ಎಚ್ಒಡಿ ಉಪಸ್ಥಿತರಿದ್ದು ಪೋಷಕರಿಗೆ ಕಾಕ್ಲಿಯರ್ ಇಂಪ್ಲಾಂಟ್ ಕಿಟ್ ಅನ್ನು ಹಸ್ತಾಂತರಿಸಿದರು.

ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು 6 ವರ್ಷದೊಳಗಿನ ಕಾಕ್ಲಿಯರ್ ಅಳವಡಿಕೆಗಾಗಿ ಕರ್ನಾಟಕ ಸರ್ಕಾರದ ಯೋಜನೆಯಡಿಯಲ್ಲಿ ಅಳವಡಿಸಲ್ಪಟ್ಟಿದೆ ಎಂದು ಡಾ. ದೀಕ್ಷಿತ್ ತಿಳಿಸಲು ಬಯಸುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವಂತೆ, ಈ ಮೂಲಕ ಒತ್ತಾಯಿಸಿದರು.

ಶ್ರೀಮತಿ ಶ್ವೇತಾ ಪ್ರಭು, ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಪರಿಣಾಮಕಾರಿಯಾಗಿಸಲು ಪೋಷಕರಿಗೆ ಶಸ್ತ್ರಚಿಕಿತ್ಸೆ ನಂತರದ ತರಬೇತಿ ಮೂಲಕ ಶ್ರವಣೇಂದ್ರಿಯ ಮೌಖಿಕ ಚಿಕಿತ್ಸೆಯಿಂದ (ಎವಿಟಿ) ಮಗುವಿನ ಮಾತು ಹಾಗು ಭಾಷೆಯ ಬೆಳವಣಿಗೆಯ ತರಬೇತಿಯನ್ನು ನೀಡಿದರು. ಪ್ರಸ್ತುತ, ಮಗು ನಿಯಮಿತ ಶ್ರವಣೇಂದ್ರಿಯ ಮೌಖಿಕ ಚಿಕಿತ್ಸೆಯನ್ನು(AVT) ಪಡೆಯುತ್ತಿದೆ.


Spread the love