Home Mangalorean News Kannada News 2 ದಿನದ ಹಸುಳೆಗೆ ಕಸ್ತೂರ್ಬಾ ಆಸ್ಪತ್ರೆಯ ನರರೋಗ ತಜ್ಞರಿಂದ ಶಸ್ತ್ರಚಿಕಿತ್ಸೆ

2 ದಿನದ ಹಸುಳೆಗೆ ಕಸ್ತೂರ್ಬಾ ಆಸ್ಪತ್ರೆಯ ನರರೋಗ ತಜ್ಞರಿಂದ ಶಸ್ತ್ರಚಿಕಿತ್ಸೆ

Spread the love

ಮಂಗಳೂರು: 24ವರ್ಷ ವಯಸ್ಸಿನ ಮೀನಾಕ್ಷಿ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆಯು ಕಸ್ತೂರ್ಬಾ ಆಸ್ಪತ್ರೆಯಲ್ಲಿ ತನ್ನ ಮೊದಲನೆ ಮಗುವಿಗೆ ಜನ್ಮ ನೀಡಿದಳು.ಹುಟ್ಟುವಾಗ ಮಗುವಿಗೆ ಬೆನ್ನಿನ ಕೆಳಭಾಗದಲ್ಲಿ ಮೈಲೊಮೆನಿನ್ಜೊಸೀಲ್ (ಅಪೂರ್ಣ ಬೆನ್ನುಹುರಿ) ಎಂಬ ಸಮಸ್ಯೆ ಇದ್ದುದರಿಂದ ನರಶಸ್ತ್ರಚಿಕಿತ್ಸಾ ತಜ್ಞರ ಸಲಹೆಯನ್ನು ಕೋರಲಾಯಿತು. ಪ್ರಾಥಮಿಕ ತಪಾಸಣೆಯ ಸಮಯದಲ್ಲಿ ಎರಡು ದಿನದ ಮಗು ಚುರುಕಾಗಿರುವುದನ್ನು, ಅಳುತ್ತಿರುವುದನ್ನು ಮತ್ತುಕಾಲುಗಳನ್ನು ಜೋರಾಗಿ ಚಲಿಸುವುದನ್ನು ಗಮನಿಸಲಾಯಿತು. ಬೆನ್ನಿನ ಮೇಲ್ಭಾಗದಲ್ಲಿ ಕಂಡುಬಂದ 3*4 ಸೆಂ ಮೀ ಗಾತ್ರದ ನೀರು ತುಂಬಿದ ಬಾವು ಮೈಲೊಮೆನಿನ್ಜೊಸೀಲ್ ಅಸ್ವಸ್ಥತೆಯ ಸೂಚನೆಯಾಗಿತ್ತು. ಎಂ ಆರ್ ಐ ಗೆ ಒಳಪಡಿಸಿದಾಗ ಬೆನ್ನುಹುರಿಯು ಕುತ್ತಿಗೆಯ ಭಾಗದಿಂದ ಬೆನ್ನಿನ ಕೆಳಭಾಗದವರೆಗೆ ಸೀಳಿಕೊಂಡಿದ್ದು ಆ10(ಎದೆಗೂಡಿನ)ನಲ್ಲಿ ಮೂಳೆ ಹೊರಚಾಚಿಕೊಂಡಿದ್ದು ಇದನ್ನು ಡೈಯಸ್ಟೊಮೆಟಮೈಲಿಯ (ಮಕ್ಕಳಲ್ಲಿ ಬೆನ್ನುಹುರಿ ಸೀಳಿಕೊಂಡಿರುವುದು) ಮತ್ತು ಬೆನ್ನಿನ ಕೆಳಭಾಗದಲ್ಲಿನ ಮೆನಿನ್ಜೊಸೀಲ್ ಎಂಬುದಾಗಿ ಪತ್ತೆಹಚ್ಚಲಾಯಿತು.

ಡೈಯಸ್ಟೊಮೆಟಮೈಲಿಯ ಎಂಬುದು ಮಕ್ಕಳಲ್ಲಿ ಅಪರೂಪವಾಗಿ ಕಂಡುಬರುವ ನರತಂತುನಳಿಗೆಗಳ ಜನ್ಮಜಾತ ದೋಷ(ಟಿeuಡಿಚಿಟ-ಣube ಜeಜಿeಛಿಣ), ಇದರಲ್ಲಿ ಎದೆಗೂಡಿನ ಅಥವಾ ಬೆನ್ನಿನ ಕೆಳಭಾಗದ ಒಂದು ಬೆನ್ನುಮೂಳೆಯಿಂದ ಮೂಳೆಯಂಥ ಅಥವಾ ನಾರಿನಂಥ ರಚನೆ ಬೆನ್ನುಮೂಳೆಯ ಕುಹರದೊಳಗೆ ಚಾಚಿಕೊಳ್ಳುವುದರಿಂದ, ಬೆನ್ನುಹುರಿಯು ವಿವಿಧ ಉದ್ದಳತೆಯ ಎರಡು ಹೆಮಿಕಾರ್ಡ್‍ಗಳಾಗಿ ಇಬ್ಭಾಗವಾಗುತ್ತದೆ. ಯಾವುದೇ ಪ್ರಮಾಣದಲ್ಲಿ ಇಬ್ಭಾಗವಾದ ಬೆನ್ನುಹುರಿಗಳು ಎಲುಬುಗೂಡಿನ ಇತರ ಅಸಂಗತತೆಗಳೊಂದಿಗೆ ಸೇರಿಕೊಂಡುಬೆನ್ನುಹುರಿಯ ವಿವಿಧ ಪ್ರಕಾರದ ಕಾರ್ಯವೈಫಲ್ಯಗಳಿಗೆ ಎಡೆಮಾಡಿಕೊಡುತ್ತವೆ. ಆದರೂ, ಹೆಚ್ಚಿನ ಪ್ರಕರಣಗಳನ್ನು ಬಾಲ್ಯಾವಸ್ಥೆಯಲ್ಲೇ ಪತ್ತೆಹಚ್ಚಲಾಗುತ್ತದೆ.

ಆಯ್ಕೆಗಳ ಅನ್ವೇಷಣೆ ನಡೆಸಿದ ಬಳಿಕ ಡಾ. ಗಿರೀಶ್ ಮೆನನ್ ನೇತೃತ್ವದ ನ್ಯೂರೋಸರ್ಜನ್ ತಜ್ಞರ ತಂಡವು ಶಸ್ತ್ರಚಿಕಿತ್ಸೆ ನೆರವೇರಿಸಲು ಮುಂದಾಯಿತು. 2  ದಿನದ ಹಸುಳೆಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಮೆನಿನ್ಜೊಸೀಲನ್ನು ಮುಚ್ಚಿ ಹೊರಚಾಚಿದ ಮೂಳೆಯನ್ನು ತೆಗೆಯಲಾಯಿತು. ಕನಿಷ್ಠ ಸೀಳಿಕೆಯ ತಂತ್ರವನ್ನು (ಒiಟಿimಚಿಟಟಥಿ Iಟಿvಚಿsive ಒiಛಿಡಿosuಡಿgiಛಿಚಿಟ ಖಿeಛಿhಟಿiques) ಬಳಸಿ ಮಗುವಿಗೆ ಶಸ್ತ್ರಚಿಕಿತ್ಸೆಗೆ ಮಾಡಲಾಯಿತು ಎಂಬುದಾಗಿ ಡಾ. ಗಿರೀಶ್ ಮೆನನ್ ಹೇಳಿದರು. ಹೆಚ್ಚಿನ ಸಂದರ್ಭಗಳಲ್ಲಿ ಇದು ರೋಗಲಕ್ಷಣಗಳಿಂದ ಸಂಪೂರ್ಣ ಉಪಶಮನ ನೀಡುತ್ತದೆ ಎಂಬುದಾಗಿ ಸಹ ಅವರು ಹೇಳಿದರು.

ಶಸ್ತ್ರಚಿಕಿತ್ಸೆಯ ಬಳಿಕ, ಮಗುವಿನ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತಿದೆ. ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು ಒಂದು ತಿಂಗಳ ಬಳಿಕ ತಪಾಸಣೆಗೆ ಬರುವ ಆವಶ್ಯಕತೆ ಇದೆ.

“ಅನುಭವಿ ಮತ್ತು ನುರಿತ ನ್ಯೂರೋಸರ್ಜನ್ನರು ಅರಿವಳಿಕೆ ತಂಡದ ಬೆಂಬಲದೊಂದಿಗೆ ಈ ಸೂಕ್ಷ್ಮ ಮತ್ತು ಕ್ಲಿಷ್ಟ ಶಸ್ತ್ರಚಿಕಿತ್ಸಾ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಯಿತು. ಸುಧಾರಿತ ನ್ಯೂರೋ ಇಂಟರ್ ವೆನ್ಷನಲ್ ಪ್ರಕ್ರಿಯೆಗಳಿಗೆ ಮತ್ತು ಆಘಾತ ಚಿಕಿತ್ಸೆಗೆ (ಣಡಿಚಿumಚಿ ಛಿಚಿಡಿe) ಹೆಸರುವಾಸಿಯಾಗಿರುವ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗವು ಈ ಸುಧಾರಿತ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು” ಎಂಬುದಾಗಿ ಡಾ. ಕರ್ನಲ್ ಎಂ. ದಯಾನಂದ ಇವರು ತಿಳಿಸಿದರು.

 


Spread the love

Exit mobile version