20 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯ ಬಂಧನ

Spread the love

20 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯ ಬಂಧನ

ಮಂಗಳೂರು: ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ಕಳ ಬಜಗೋಳಿ ನಿವಾಸಿ ಝಕಾರಿಯಾ ಎಂದು ಗುರುತಿಸಲಾಗಿದೆ.

ಮಂಗಳೂರು ಉತ್ತರ ಪೊಲೀಸು ಠಾಣೆಯಲ್ಲಿ 2000 ನೇ ಇಸವಿಯಲ್ಲಿ ದಾಖಲಾದ CR.NO: 167/2000 U/S 39(3) (a)R/w 51 of Wild Life Act 1972 ನೇ L.P.C ಪ್ರಕರಣದಲ್ಲಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಝಕಾರಿಯಾ ಎಂಬಾತನನ್ನು ಮಂಗಳೂರು ಉತ್ತರ ಪೊಲೀಸು ಠಾಣೆಯ ಪೊಲೀಸು ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಇವರ ಮಾರ್ಗದರ್ಶನದಂತೆ ಠಾಣಾ ಸಹಾಯಕ ಪೊಲೀಸು ಉಪ ನಿರೀಕ್ಷಕ ಓಂದಾಸ್ ಇವರು ಸತತ ಮಾಹಿತಿ ಸಂಗ್ರಹಿಸಿ ಜೊತೆಗೆ ಠಾಣಾ ಪೊಲೀಸು ಕಾನ್‌ ಸ್ಟೇಬಲ್ ಸಂಪತ್ ಇವರೊಂದಿಗೆ ವಶಕ್ಕೆ ಪಡೆದಿರುತ್ತಾರೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

20 ವರ್ಷಗಳಿಂದ ತಲೆಮರೆಸಿಕೊಂಡಿರುವ ಆರೋಪಿತನನ್ನು ಪತ್ತೆ ಮಾಡಿದ ಮಂಗಳೂರು ಉತ್ತರ ಪೊಲೀಸು ಠಾಣೆಯ ಪೊಲೀಸು ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಇವರಿಗೆ ಮತ್ತು ಠಾಣಾ ಸಹಾಯಕ ಪೊಲೀಸು ಉಪ ನಿರೀಕ್ಷಕ ಓಂದಾಸ್ ಹಾಗು ಪೊಲೀಸು ಕಾನ್‌ ಸ್ಟೇಬಲ್ ಸಂಪತ್ ಇವರುಗಳಿಗೆ ‌ ಶಶಿಕುಮಾರ್ ಪೊಲೀಸು ಆಯುಕ್ತರು, ಮಂಗಳೂರು ನಗರ ಇವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.


Spread the love