2021ರಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮತೀಯ ಗಲಭೆ ಹಾಗೂ ದರೋಡೆ ಸಂಚು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾರಿಯಾಗಿದ್ದ ಎನ್‌ಬಿಡಬ್ಲ್ಯು (Non-Bailable Warrant) ವಾರಂಟ್‌ಗಳನ್ನು ತಪ್ಪಿಸಿಕೊಂಡು 2021ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಿಜು @ ವಿಜಯ್ (ತಂದೆ: ಬಿಜು ಸ್ಯಾಮ್ ವೆಲ್), ರಾಯಿಕಟ್ಟೆ, ಬಂಗ್ರಕೂಳೂರು, ಕೂಳೂರು ನಿವಾಸಿ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಮಂಗಳೂರು ನಗರದ ಕಾವೂರು ಹಾಗೂ ಉರ್ವ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಎರಡು ಎನ್‌ಬಿಡಬ್ಲ್ಯು ವಾರಂಟ್‌ಗಳು ಬಾಕಿ ಇದ್ದವು.
ಆರೋಪಿಯ ವಿರುದ್ಧ ಬಾಕಿ ಇದ್ದ ಪ್ರಕರಣಗಳ ವಿವರ ಹೀಗಿದೆ:
ಕಾವೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2021 – ಕಲಂ 427, 295(ಎ), 120(ಬಿ), 212 ಹಾಗೂ 34 ಐಪಿಸಿ.
ಉರ್ವ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2021 – ಕಲಂ 505, 295(ಎ), 153(ಎ), 426, 143, 149, 295 ಐಪಿಸಿ.
ಆರೋಪಿ ಕಳೆದ ಐದು ವರ್ಷಗಳಿಂದ ಮೇಲ್ಕಂಡ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ ಆರೋಪಿಯ ವಿರುದ್ಧ ಈ ಕೆಳಕಂಡ ಪ್ರಕರಣಗಳೂ ದಾಖಲಾಗಿವೆ:
ಕಾವೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2021 – ಕಲಂ 427, 295(ಎ), 120(ಬಿ), 212 ಹಾಗೂ 34 ಐಪಿಸಿ.
ಉರ್ವ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 75/2021 – ಕಲಂ 505, 295(ಎ), 153(ಎ), 426, 143, 149, 295 ಐಪಿಸಿ.
ಪಣಂಬೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2016 – ಕಲಂ 120(ಬಿ), 115, 399, 400, 511 ಭಾ.ದಂ.ಸಂ. ಹಾಗೂ 20, 25, 27 ಇಂಡಿಯನ್ ಆರ್ಮ್ಸ್ ಕಾಯಿದೆ.
ಉತ್ತರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 65/2018 – ಕಲಂ 379 ಐಪಿಸಿ.
ಕಾವೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 10/2018 – ಕಲಂ 27(ಬಿ) ಎನ್‌ಡಿಪಿಎಸ್ ಕಾಯಿದೆ.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
