ಕಬಡ್ಡಿ ಪಂದ್ಯಾಟದ ವೇಳೆ ಕುಸಿದ ಪ್ರೇಕ್ಷಕರ ಗ್ಯಾಲರಿ 7 ಮಂದಿ ಆಸ್ಪತ್ರೆಗೆ ದಾಖಲು

Spread the love

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮತ್ತು ದ.ಕ. ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಆಶ್ರಯದಲ್ಲಿ ಪಣಂಬೂರು ಬೀಚ್‌ನಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ರಾಷ್ಟ್ರಮಟ್ಟದ ಆಹ್ವಾನಿತರ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿ ಕುಸಿದು 7 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

image008gallery-collapses-kabbadi-panambur-20160416-008 image009gallery-collapses-kabbadi-panambur-20160416-009 image007gallery-collapses-kabbadi-panambur-20160416-007 image006gallery-collapses-kabbadi-panambur-20160416-006

ಅಖಿಲ ಭಾರತ ಆಹ್ವಾನಿತ ಬೀಚ್‌ ಮ್ಯಾಟ್‌ ಪುರುಷರ ಹೊನಲು ಬೆಳಕಿನ ಪಂದ್ಯಾಟವು ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಸಂಜೆ ಕಬಡ್ಡಿ ಕೋರ್ಟ್‌ನ ಉದ್ಘಾಟನೆಯ ಬಳಿಕ ಸುಮಾರು 8 ಗಂಟೆಗೆ ಸಚಿವರು, ಶಾಸಕರ ಸಹಿತ ಜಿಲ್ಲಾಧಿಕಾರಿಗಳನ್ನೊಳಗೊಂಡು ಸಭಾ ಕಾರ್ಯಕ್ರಮ ನಡೆಯಿತು. ಕೆಲವೇ ಹೊತ್ತಿನಲ್ಲಿ ಪಂದ್ಯಾಟವನ್ನು ಆರಂಭಿಸಲಾಗಿತ್ತು. ಈ ಸಂದರ್ಭ ಗ್ಯಾಲರಿಯು ಹಠಾತ್‌ ಕುಸಿದು ಬಿದ್ದ ಪರಿಣಾಮ ಕೆಲವು ಪ್ರೇಕ್ಷಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

ಆಸ್ಪತ್ರೆಯ ಮೂಲಗಳ ಪ್ರಕಾರ 24 ಮಂದಿಯನ್ನು ಆಸ್ಪತ್ರೆಗೆ ತರಲಾಗಿದ್ದು, 17 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದು, 7 ಮಂದಿಯನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ.

ಸಂಘಟಕರ ಪ್ರಕಾರ ನೇರಪ್ರಸಾರದ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮಾರಾಮ್ಯಾನ್ ಗಾಯಗೊಂಡಿದ್ದು, ಆತನ ಕಾಲಿಗೆ ಏಟು ಬಿದ್ದಿದ್ದು ಎಜೆ ಆಸ್ಪತ್ರೆಗೆ ದಾಖಲಿಸಲಿದೆ. ಉಳಿದ 6 ಮಂದಿಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲ ಬಾರಿಗೆ ಇಂತಹ ಪಂದ್ಯಾಟವನ್ನು ಆಯೋಜಿಸುತ್ತಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಾಗಿತ್ತು. ಯಾರಿಗೂ ಕೂಡ ಸಮಸ್ಯೆಯಾಗಬಾರದು ಎಂಬುದು ನಮ್ಮ ಅಪೇಕ್ಷೆ. ಘಟನೆಯ ಕುರಿತು ಕೆಲವೊಂದು ಮಾಧ್ಯಮಗಳಲ್ಲಿ ತಪ್ಪಾಗಿ ಸುದ್ದಿ ಪ್ರಕಟಗೊಂಡಿದ್ದು ಜನರು ಸುಳ್ಳು ಸುದ್ದಿಗೆ ಕಿವಿಕೊಡದಂತೆ ವಿನಂತಿಸಿದ್ದಾರೆ.

ಘಟನೆಯ ಕುರಿತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕ ಮೊಯ್ದಿನ್ ಬಾವಾ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


Spread the love

1 Comment

  1. This shows the level of incompetence of our system and officials. All those top officials and local politicians (only Congress by the way!!) should be ashamed of themselves!! These are the same officials and leaders who can’t even fix simple things like garbage issues and broken footpath in the city!! Here they are with huge smile posing for cameras at ‘national level’ kabaddi championship as if they have nothing better to do!!! What a joke!!!

Comments are closed.