
25ನೇ ದೇರೆಬೈಲ್ ಪಶ್ಚಿಮ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ
ಮಂಗಳೂರು: ದಕ್ಷಿಣ ಕ್ಷೇತ್ರದ 25ನೇ ದೇರೆಬೈಲ್ ಪಶ್ಚಿಮ ವಾರ್ಡಿನ ಅಶೋಕ ನಗರ,ಸುಂಕದಕಟ್ಟೆ ಮತ್ತಿತ್ತರ ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ಅವರಿಂದ ಬಿರುಸಿನ ಚುನಾವಣಾ ಪ್ರಚಾರ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಲೋಬೊ ರವರು,ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ಗಳನ್ನು ಈಗಾಗಲೇ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪಿಸಿರುವುದರಿಂದ ಮತದಾರರಿಗೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಉಂಟಾಗಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳನ್ನು ಪೂರೈಸುವ ನಂಬಿಕೆ ಸಾರ್ವಜನಿಕರು ತೋರಿಸಿರುತ್ತಾರೆ.ಹಿಂದೆ ಶಾಸಕನಾಗಿದ್ದಾಗ ಅನೇಕ ಜನಪರ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಮುಂದೆಯೂ ಕೂಡ ಅವಕಾಶ ಮಾಡಿಕೊಟ್ಟಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ನೆರವೇರಿಸುವ ಗುರಿ ಇದೆ ಎಂದರು.
ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಪಕ್ಷದ ಪ್ರಮುಖರಾದ ಸಂತೋಷ್ ಶೆಟ್ಟಿ,ಚೇತನ್ ಕುಮಾರ್, ಪದ್ಮನಾಭ ಅಮೀನ್, ರಮಾನಂದ ಪೂಜಾರಿ, ರೂಪಾ ಚೇತನ್, ಎಸ್. ಡಿ. ಮಾಬೆನ್, ಜಯರಾಮ್ ಕಾರಂದೂರ್, ರವಿ ಅಮೀನ್, ಕಿಶೋರ್, ಗಂಗಾಧರ್, ರವಿ ಕುಮಾರ್, ಪುರಂದರ, ಚಂದ್ರಶೇಖರ ಕೊಟ್ಟಾರ, ಸುರೇಂದ್ರ, ಪ್ರವೀಣ್ ಸಾಲ್ಯಾನ್, ವಿಜಯ್ ಕುಮಾರ್ ಬಿ. ಕೆ., ವೇಲ್ವಿನ್, ಜೋಸೆಫ್ ಲೋಬೊ, ಸೀತಾರಾಮ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.