
25ನೇ ದೇರೆಬೈಲ್ ವಾರ್ಡ್ ನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ಗಳ ವಿತರಣೆ
ಮಂಗಳೂರು: ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ವತಿಯಿಂದ ಇಂದು ತಾ 30.5.2021ರಂದು ನಗರದ 25ನೇ ದೇರೆಬೈಲ್ ವಾರ್ಡ್ ವ್ಯಾಪ್ತಿಯಲ್ಲಿರುವ ಉರ್ವಾ ಸ್ಟೋರ್ ಸುಂಕದಕಟ್ಟೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಗೃಹ ಬಳಕೆಯ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಸುಂಕದಕಟ್ಟೆಯ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಧರ್ಮದರ್ಶಿ ಶ್ರೀ ಧರ್ಮಣ್ಣ ರವರು ಕಾರ್ಯಕ್ರಮವನ್ನು ಉದ್ಘಾಟನೆಗೈದರು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊರವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಕೊರೋನಾ ಮಹಾಮಾರಿಯ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಕೆಲಸವಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರು ಬಹಳ ಕಷ್ಟದಲ್ಲಿರುವಾಗ ಕಾಂಗ್ರೆಸ್ ಪಕ್ಷವು ಜನರಿಗೆ ಸಹಾಯವನ್ನು ಮಾಡುವ ದೃಷ್ಟಿಯಲ್ಲಿ ದಿನಸಿ ಸಾಮಾನುಗಳ ಕಿಟ್ ಗಳನ್ನು ಒದಗಿಸಲಾಗಿತ್ತಿದೆ. ಇಂದು ಬಡವರಿಗೆ ಸಹಾಯ ಮಾಡುವ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ದಿ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಉಳುವವನಿಗೆ ಭೂಮಿ ಕಾಯಿದೆಯನ್ನು ಜಾರಿ ಮಾಡಿ ಬಡವರಿಗೆ ಬಹಳಷ್ಟು ಸಹಾಯ ಮಾಡಿದ್ದರು. ಅದೇ ರೀತಿ ಇಂದು ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಇದೆ ಎಂದರು.
ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಸಂತೋಷ್ ಶೆಟ್ಟಿ, ಟಿ. ಕೆ. ಸುಧೀರ್, ನೀರಜ್ ಪಾಲ್, ಚೇತನ್ ಪೂಜಾರಿ, ರೂಪ ಚೇತನ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ,ವಾರ್ಡ್ ಅಧ್ಯಕ್ಷ ಸತೀಶ್ ಪೂಜಾರಿ, ಮಂಜುಳಾ ನಾಯಕ್,ಉದಯ ಕುಂದರ್, ರಘುರಾಜ್ ಕದ್ರಿ, ಜಯರಾಮ್, ಪ್ರಮೀಳಾ, ಆಸೀಫ್, ಶಾನ್ ಡಿಸೋಜಾ, ಯಸ್ವಂತ್ ಪ್ರಭು, ಸಮರ್ಥ ಭಟ್, ಸವಾನ್ ಎಸ್. ಕೆ.,ಕ್ಲಿಫರ್ಡ್ ಸೋನ್ಸ್, ಕನಕ ದಾಸ್ ಪೂಜಾರಿ, ದೇವದಾಸ್, ಸಂದೀಪ್, ಸದಾಶಿವ, ಎಸ್. ಡಿ. ಮಾಬೆನ್, ಗಂಗಾಧರ್, ಬಿ. ರಾಮಕೃಷ್ಣ, ನಿತ್ಯಾನಂದ, ರವಿ, ಪುರಂದರ, ಚಂದ್ರಹಾಸ, ರಮೇಶ್, ಲಕ್ಷ್ಮಣ್, ಸುರೇಂದ್ರ, ಗಣೇಶ್, ಭೋಜ, ಪ್ರವೀಣ್, ಮಹಾಬಲ, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಿವೈಎಫ್ಐ ಕಾರ್ಯಕರ್ತ ಕಿಶೋರ್ ಎಂ. ಸುಂಕದಕಟ್ಟೆ ಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲಾಯಿತು.