25 ವರ್ಷಗಳ ಮುಂದಿನ ಯೋಚನೆಯನ್ನು ಇಟ್ಟುಕೊಂಡು ಮಾಡಿರುವ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್: ಪೆರ್ಣಂಕಿಲ ಶ್ರೀಶ ನಾಯಕ್

Spread the love

25 ವರ್ಷಗಳ ಮುಂದಿನ ಯೋಚನೆಯನ್ನು ಇಟ್ಟುಕೊಂಡು ಮಾಡಿರುವ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್: ಪೆರ್ಣಂಕಿಲ ಶ್ರೀಶ ನಾಯಕ್

ಊಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ ಕೇಂದ್ರ ಬಜೆಟ್ ದೂರದರ್ಶಿತ್ವದ ಚಿಂತನೆಯೊಂದಿಗೆ ಅಭಿವೃದ್ಧಿ ಪರ ಅತ್ಮನಿರ್ಭರ ಬಜೆಟ್ ಆಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್ ಹೇಳಿದ್ದಾರೆ.

ರಸ್ತೆಗಳ ನಿರ್ಮಾಣಕ್ಕೆ ಒತ್ತು, ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ, ಕೈಗಾರಿಕೆ, ಸಾವಯವ ಕೃಷಿ, ಕೌಶಲ್ಯಾಭಿವೃದ್ಧಿ, ಮನೆ ಮನೆಗೆ ನಳ್ಳಿ ನೀರು, ದೇಶದ 5 ನದಿಗಳ ಜೋಡಣೆ, ಹೆಚ್ಚುವರಿ ರೈಲು, ರೈಲ್ವೇ ನಿಲ್ದಾಣದ ಉನ್ನತೀಕರಣ, ಡಿಜಿಟಲ್ ಆರ್ಥಿಕತೆ, ಕನಿಷ್ಠ ಬೆಂಬಲ ಬೆಲೆ, ಡಿಜಿಟಲ್ ಯೂನಿವರ್ಸಿಟಿ, ಒನ್ ನೇಷನ್ ಒನ್ ರಿಜಿಸ್ಟ್ರೇಷನ್, ವಿವಿಧ ಕ್ಷೇತ್ರಗಳ ಡಿಜಿಟಲೀಕರಣ, ಪಿಎಂ ಆವಾಜ್ ಯೋಜನೆಯಡಿ ಮನೆ ನಿರ್ಮಾಣ, ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ, ಇ-ಪಾಸ್ ಪೋರ್ಟ್, ಮಹಿಳಾ ಸಬಲೀಕರಣ, ಅಂಗನವಾಡಿಗಳ ಉನ್ನತೀಕರಣ, ವಿವಿಧ ಇಲಾಖೆಗಳಲ್ಲಿ ಆತ್ಮನಿರ್ಭರತೆ, ಮೇಕ್ ಇನ್ ಇಂಡಿಯಾ, ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ವರೆಗೆ ಬಡ್ಡಿ ರಹಿತ ಸಾಲ, ಅಮೃತ ಸ್ಕೀಂ ಅಡಿಯಲ್ಲಿ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಇವೇ ಮುಂತಾದ ಸಕಾರಾತ್ಮಕ ಅಂಶಗಳು ಈ ಬಾರಿಯ ಕೇಂದ್ರ ಬಜೆಟ್ ನ ವಿಶೇಷತೆಗಳಾಗಿವೆ.

ಹಲವಾರು ಅಗತ್ಯ ವಸ್ತುಗಳ ಮೇಲೆ ಸುಂಕವನ್ನು ಇಳಿಕೆ ಸ್ವಾಗತಾರ್ಹವಾಗಿದ್ದು, ಉತ್ಪಾದಕತೆ, ಹಣಕಾಸು ಹೂಡಿಕೆ, ಹವಾಮಾನ ಕ್ರಮ ಮತ್ತು ಪಿಎಂ ಗತಿಶಕ್ತಿ ಯೋಜನೆ ಈ ನಾಲ್ಕು ಪ್ರಮುಖ ಆಯಾಮಗಳಲ್ಲಿ ರೂಪಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ. ಡಿಜಿಟಲ್ ಇಂಡಿಯಾ ಇದರ ಭಾಗವಾಗಿ ಪ್ರತಿ ಹಳ್ಳಿಗಳಿಗೂ ಫೈಬರ್ ಕೇಬಲ್ ಅಳವಡಿಸುವ ಯೋಜನೆಯನ್ನು ಹಾಕಿಕೊಂಡ ಯೋಜನೆ ಯುವ ಸಮೂಹಕ್ಕೆ ಬಹಳಷ್ಟು ಉಪಯುಕ್ತ ಆಗಲಿದೆ. ದೇಶದ ರಕ್ಷಣೆ ವಿಷಯದಲ್ಲೂ ಬಜೆಟ್ ಬಹಳಷ್ಟು ಪೂರಕವಾಗಿ ಯೋಜನೆಗಳನ್ನು ಹಾಕಿಕೊಂಡಿದೆ ರಕ್ಷಣಾ ವಲಯಕ್ಕೆ ಬೇಕಾಗುವ ಎಲ್ಲೇ ಸಾಮಗ್ರಿಗಳನ್ನು ಭಾರತದಲ್ಲೇ ಉತ್ಪಾದಿಸುವಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಈ ಬಾರಿಯ ಕೇಂದ್ರ ಬಜೆಟ್ ದೂರದರ್ಶಿತ್ವದ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್ ಆಗಿ ಹೊರ ಹೊಮ್ಮಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love