3 ಕೆಜಿ ಗಾಂಜಾ ಸಹಿತ ಇಬ್ಬರನ್ನು ಬಂಧಿಸಿದ ಪೊಲೀಸರು

Spread the love

3 ಕೆಜಿ ಗಾಂಜಾ ಸಹಿತ ಇಬ್ಬರನ್ನು ಬಂಧಿಸಿದ ಪೊಲೀಸರು
 
ಮಂಗಳೂರು: ನಗರದ ಬಂದರು ಪ್ರದೇಶದಲ್ಲಿ ಜುಲೈ 26 ರಂದು ಸಂಜೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿಗಳಾದ ಅಬ್ದುಲ್ ರಹೀಮ್ ಅಲಿಯಾಸ್ ಚಪ್ಪೆ ತನ್ನಿ ರಹೀಮ್(43) ಮತ್ತು ಮೊಹಮದ್ ಅಶ್ರಫ್ ಅಲಿಯಾಸ್ ಕರಿಯ(47) ಎನ್ನುವವರಾಗಿದ್ದಾರೆ.

ಬಂಧಿತರಿಂದ 1,67,000 ರೂ. ಮೌಲ್ಯದ 3 ಕೆಜಿ 378 ಗ್ರಾಂ ಗಾಂಜಾ , 4,940 ರೂ ನಗದು ಮತ್ತು ಸ್ಕೂಟರ್ ವಶ ಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬಂದಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ,NDPS ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love