31ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್: ನ.29ರಂದು ರಾಜ್ಯ ತಂಡದ ಆಯ್ಕೆ ಟ್ರಯಲ್ಸ್
ಬಾಗಲಕೋಟೆ: ತಮಿಳುನಾಡಿನ ಕೊಯಮತ್ತೂರಿನಲ್ಲಿ 2026ರ ಡಿಸೆಂಬರ್ 26ರಿಂದ 30ರವರೆಗೆ ನಡೆಯಲಿರುವ 31ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ ಕರ್ನಾಟಕ ರಾಜ್ಯ ತಂಡದ ಆಯ್ಕೆ ಟ್ರಯಲ್ಸ್ ನವೆಂಬರ್ 29ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ಬೈಪಾಸ್ ರಸ್ತೆಯಲ್ಲಿ ನಡೆಯಲಿದೆ.
14, 16, 18 ಮತ್ತು 23 ವರ್ಷ ವಯೋಮಾನದ ಬಾಲಕ-ಬಾಲಕಿಯರ ವಿಭಾಗಗಳೊಂದಿಗೆ ಮುಕ್ತ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿಯೂ ಪ್ರತ್ಯೇಕವಾಗಿ ಆಯ್ಕೆ ಟ್ರಯಲ್ಸ್ ನಡೆಸಲಾಗುವುದು. ಇಂಡಿವಿಜುವಲ್ ಟೈಮ್ ಟ್ರಯಲ್ ಆಧಾರದ ಮೇಲೆ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ರೋಡ್ ಸೈಕ್ಲಿಂಗ್ಗೆ ನಿಗದಿಪಡಿಸಿರುವ ಸೈಕಲ್ಗಳನ್ನು ಬಳಸುವುದು ಹಾಗೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.
ನೋಂದಾಯಿತ ಸಂಸ್ಥೆಗಳು ತಮ್ಮ ಹಂತದಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುವಾಗ ಅವರ ವಯಸ್ಸಿನ ಅರ್ಹತೆಯನ್ನು ಖಚಿತಪಡಿಸಿಕೊಂಡು ರಾಜ್ಯಮಟ್ಟದ ಆಯ್ಕೆ ಟ್ರಯಲ್ಸ್ಗೆ ಕಳುಹಿಸಿಕೊಡಬೇಕು. ಜಿಲ್ಲಾ ತಂಡಗಳು, ಕ್ರೀಡಾ ಶಾಲೆಗಳು ಹಾಗೂ ಕ್ರೀಡಾ ನಿಲಯಗಳು ತಮ್ಮ ತಂಡಗಳನ್ನು ರಚಿಸಿ, ಕ್ರೀಡಾಪಟುಗಳು ತರಬೇತುದಾರರೊಂದಿಗೆ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಕ್ರೀಡಾಪಟುಗಳ ನೋಂದಣಿಗಾಗಿ ಪ್ರತಿ ಘಟಕಕ್ಕೂ ಗೂಗಲ್ ಫಾರ್ಮ್ ಕಳುಹಿಸಲಾಗುತ್ತದೆ. ನವೆಂಬರ್ 26ರೊಳಗೆ ಕಡ್ಡಾಯವಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಮುಧೋಳ ಬೈಪಾಸ್ ರಸ್ತೆಯಲ್ಲಿ ನವೆಂಬರ್ 29ರಂದು ಬೆಳಗ್ಗೆ 7 ಗಂಟೆಯಿಂದ ಆಯ್ಕೆ ಸ್ಪರ್ಧೆಗಳು ಆರಂಭವಾಗಲಿದ್ದು, ಎಲ್ಲ ಕ್ರೀಡಾಪಟುಗಳು ನಿಗದಿತ ಸಮಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಮೇತ್ರಿ ಅವರನ್ನು ಮೊ. 9008936620 ಸಂಪರ್ಕಿಸಬಹುದು.
