36 ವರ್ಷದ ನಿತಿನ್ ಬೈಕಂಪಾಡಿಯಿಂದ ನಾಪತ್ತೆ

Spread the love

36 ವರ್ಷದ ನಿತಿನ್ ಬೈಕಂಪಾಡಿಯಿಂದ ನಾಪತ್ತೆ

ಮಂಗಳೂರು: 36-ವರ್ಷದ ನಿತಿನ್, ಯೆಯ್ಯಾಡಿ ಕೆಲಸಕ್ಕೆಂದು ಹೋದವರು ಮಾರ್ಚ್ 11 ರಿಂದ ನಾಪತ್ತೆಯಾಗುತ್ತಾರೆ.

ಪಿರ್ಯಾದಿ ಶ್ರೀಮತಿ ಸುಶ್ಮಿತಾ ಆಚಾರ್ಯ ರವರು ಗಂಡನಾದ ನಿತಿನ್ ಹಾಗೂ ತಾಯಿಯೊಂದಿಗೆ ವಾಸವಾಗಿತ್ತಾರೆ. ನಿತಿನ್ ಎಂಬವರು ಮಂಗಳೂರಿನ ಯೆಯ್ಯಾಡಿಯಲ್ಲಿರುವ ವೈನ್ಸ್ ಎಂಡ್ ಸ್ಪಿರಿಟ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 11-03-2022 ರಂದು ಬೆಳಿಗ್ಗೆ ಸಮಯ ಸುಮಾರು 09-11 ಗಂಟೆಗೆ ಪಿರ್ಯಾದಿಯನ್ನು ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಸೋಲಾರ ಫಾರ್ಮ್ ಕಂಪೆನಿಗೆ ಮೋಟಾರ್ ಸೈಕಲಿನಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋಗಿದ್ದರು.  ನಂತರ ಬೆಳಿಗ್ಗೆ 11-36 ಗಂಟೆಗೆ ಮೊಬೈಲ್ ಪೋನ್ ಮಾಡಿದಾಗ ಕರೆಯನ್ನು ಸ್ವೀಕರಿಸಿದ್ದು, ನಂತರ ಪೋನ್ ಸ್ವೀಕರಿಸಿರುವುದಿಲ್ಲ.

ಪಿರ್ಯಾದಿ ಗಂಡನವರು ದಿನನಿತ್ಯ ರಾತ್ರಿ 11-3a0 ರ ಸುಮಾರಿಗೆ ಮನೆಗೆ ವಾಪಾಸಾಗುತ್ತಿದ್ದು, ಅವರು ಬಾರದಿದ್ದರಿಂದ ನಿತಿನ್ ಕೆಲಸ ಮಾಡುತ್ತಿದ್ದ ವೈನ್ಸ್ ಎಂಡ್ ಸ್ಪಿರಿಟ್ ಗೆ ಪೋನ್ ಮಾಡಿದಾಗ ನಿತಿನ್ ಸುಮಾರು 3 ದಿನದಿಂದ ಕೆಲಸಕ್ಕೆ ಬರಲಿಲ್ಲವಾಗಿ ಮಾಹಿತಿ ಲಭ್ಯವಾಗಿರುತ್ತದೆ. ಪಿರ್ಯಾದಿಯ ಗಂಡ ನಿತಿನ್ ರವರು ಕೆಲಸಕ್ಕೂ ಹೋಗದೆ ಮನೆಗೆ ಬಾರದೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದೆ ಇದ್ದು ಕಾಣೆಯಾಗಿರುತ್ತಾರೆ. ಕಾಣೆಯಾದ ನಿತಿನ್ ರವರನ್ನು ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದ್ದರಿಂದ ವಿಳಂಬವಾಗಿ ನೀಡಿದ ದೂರಿನಂತೆ ಈ ಬಗ್ಗೆ ಪಣಂಬೂರು  ಠಾಣೆಯಲ್ಲಿ ಅಪರಾಧ ಕ್ರಮಾಂಕ: 14/2022 ಕಲಂ: ಮನುಷ್ಯ   ಕಾಣೆ  ರೀತ್ಯಾ  ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ನಿತಿನ್  ಸುಮಾರು 5 ಅಡಿ 8ಇಂಚು ಎತ್ತರ,  ಗೋದಿ ಮೈಬಣ್ಣ , ಸಾಧಾರಣ ಶರೀರ ಹೊಂದಿದ್ದು ಕೆಂಚು ತಲೆಕೂದಲು ಉಳ್ಳವರಾಗಿದ್ದಾರೆ. ಅವರು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡಬಲ್ಲರು. ಅವರು ಹಸಿರು ಬಣ್ಣದ ಟಿ- ಶರ್ಟ್ , ನೀಲಿ ಬಣ್ಣದ ಜೀನ್ಸ್ ಪ್ಯಾಂಟ್  ಧರಿಸಿದ್ದರು.

ಮೇಲ್ಕಂಡ ಕಾಣೆಯಾದ ಶ್ರೀ ನಿತಿನ್ ರವರ ಮಾಹಿತಿ ತಿಳಿದು ಬಂದಲ್ಲಿ ಪಣಂಬೂರು  ಪೊಲೀಸ್ ಠಾಣೆಗೆ 0824-2220530, 9480805355, 9480805331 ನಂಬ್ರಕ್ಕೆ ಅಧವಾ ಮಂಗಳೂರು ನಗರ ಕಂಟ್ರೋಲ್‌ ರೂಮ್‌‌ 0824-2220800 ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಕೋರಬೇಕಾಗಿ ವಿನಂತಿ.


Spread the love