5 ವರ್ಷಗಳಿಂದ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡು ವಿದೇಶದಲ್ಲಿದ್ದ ಆರೋಪಿಯ ಬಂಧನ

Spread the love

5 ವರ್ಷಗಳಿಂದ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡು ವಿದೇಶದಲ್ಲಿದ್ದ ಆರೋಪಿಯ ಬಂಧನ

ಮಂಗಳೂರು: ನಗರ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಆಕೆ 128/2018 ಕಲಂ 143,147,148,324,307, ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಮೊಹಮ್ಮದ್ ಅಜರುದ್ದೀನ್ ಯಾನೆ ಅಜರ್ (31 ಉಳಾಯಿಬೆಟ್ಟು, ಮಂಗಳೂರು ಎಂಬಾತನು ಸುಮಾರು 5 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ವಿದೇಶದಲ್ಲಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ಈತನ ಮೇಲೆ LOC ಹೊರಡಿಸಲಾಗಿತ್ತು.

ದಿನಾಂಕ 27/05/2023 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈತನನ್ನು ಮುಂಬೈ ಏರ್ಮೋರ್ಟನ ಇಮಿಗ್ರೇಷನ್ ವಿಭಾಗವು ಬಂಧಿಸಿ ಅವನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಶಿವಕುಮಾರ್ ಕೆ. ಆರ್ ರವರ ಮಾರ್ಗದರ್ಶನದಂತೆ ಎಎಸ್ಐ ವಿನೋದ್, ಪಿ.ಸಿ 3155 ನೇ ಸದ್ದಾಂ ಹುಸೇನ್, ಪಿ.ಸಿ 3178 ಮಲ್ಲಿಕಾರ್ಜುನ ರವರು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನಲ್ಲಿರುತ್ತಾನೆ.


Spread the love