
5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ
ವಿಟ್ಲ: ಕೇರಳದ ಕಣ್ಣೂರು ಕೆಳಕೆ ವಿಟ್ಟಿಲ್ ತಂಬಾಯಿ ಟಿ.ವಿ ಕುಂಞಮಂಗಲ ಪಾಣಚೇರಿ ಪಯ್ಯನ್ನೂರು ನಿವಾಸಿ, ತಲೆಮರೆಸಿ ವಿದೇಶಕ್ಕೆ ತೆರಳಿದ್ದ ಆರೋಪಿ ಸುಜಾತಾ( 42) ವಿದೇಶದಿಂದ ಮರಳಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಸುಮಾರು 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದು, ಫೆ.8ರಂದು ರಾತ್ರಿ 2-30 ಗಂಟೆಗೆ ಕೇರಳ ರಾಜ್ಯದ ಕೋಝಿಕೊಡ್ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಆರೋಪಿ ಸುಜಾತಾ ವಿದೇಶದಿಂದ ಬಂದಿದ್ದು ಇಮಿಗ್ರೇಷನ್ ಅಧಿಕಾರಿಯವರು ಬಂಧಿಸಿ ಮಾಹಿತಿಯನ್ನು ನೀಡಿ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣಾ ಎ.ಎಸ್.ಐ. ಜಯರಾಮ ಮತ್ತು ಮಹಿಳಾ ಸಿಬ್ಬಂದಿ ಸಂಗೀತಾ ಅವರು ಕೇರಳ ರಾಜ್ಯಕ್ಕೆ ತೆರಳಿ ಆರೋಪಿ ಸುಜಾತಾಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.