
50 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾದ ಇನ್ನೂ7 ಗ್ರಾಮ ಪಂಚಾಯತ್ ಗಳು ಸಂಪೂರ್ಣ ಲಾಕ್ ಡೌನ್
ಉಡುಪಿ: ಈಗಾಗಲೇ 50 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆ ಆಗಿರುವ ಗ್ರಾಮ ಪಂಚಾಯತ್ ಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು ಜೂನ್ 5 ರಿಂದ ಜೂನ್ 7 ವರೆಗೆ ಹೆಚ್ಚುವರಿಯಾಗಿ ಗ್ರಾಮಪಂಚಾಯತ್ ಗಳನ್ನು ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ
ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಸಂಪೂರ್ಣ ಲಾಕ್ ಡೌನ್ ಗೆ ಆದೇಶ ಮಾಡಲಾಗಿರುತ್ತದೆ. ಸದರಿ ಸಂಪೂರ್ಣ ಲಾಕ್ ಡೌನ್ ಆಗಿರುವ ಗ್ರಾಮಪಂಚಾಯತ್ ಗಳಿಗೆ ಅಸುಪಾಸಿನಲ್ಲಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಹೊಂದಿರುವ ಗ್ರಾಮಪಂಚಾಯತ್ ಗಳಲ್ಲಿ ಆಯಾ ಗ್ರಾಮಪಂಚಾಯತ್ ಕಾರ್ಯಪಡೆಗಳು ಸಂಪೂರ್ಣ ಲಾಕ್ ಡೌನ್ ಮಾಡುವ ಬಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿವೆ. ಹಾಗೆಯೇ 50 ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕೂಡ ಸಂಪೂರ್ಣ ಲಾಕ್ ಡೌನ್ ಮಾಡುವುದು ಸಮಂಜಸವಾಗಿದ್ದು, ಈ ಕಳಗೆ ಕಾಣಿಸಿದ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಜೂನ್ 4 ರಂದು ಅವಕಾಶ ನೀಡಲಾಗಿದೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಜೂನ್ 5 ಬೆಳಗ್ಗೆ 6 ರಿಂದ ಜೂನ್ 7 ಬೆಳಗ್ಗೆ 6 ರ ವರೆಗೆ ಲಾಕ್ ಡೌನ್ ಇರಲಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ
1) ಕೂಕ್ಕರ್ಣ ಗ್ರಾಮಪಂಚಾಯತ್ – ಬ್ರಹ್ಮಾವರ ತಾಲೂಕು
2) ಅವರ್ಸೆ ಗ್ರಾಮಪಂಚಾಯತ್ – ಬ್ರಹ್ಮಾವರ ತಾಲೂಕು
3) ಹನಹಳ್ಳಿ ಗ್ರಾಮಪಂಚಾಯತ್ – ಬ್ರಹ್ಮಾವರ ತಾಲೂಕು
4) ಕಲ್ಯ ಗ್ರಾಮಪಂಚಾಯತ್ – ಕಾರ್ಕಳ ತಾಲೂಕು
5) ತಲ್ಲೂರು ಗ್ರಾಮಪಂಚಾಯತ್ – ಕುಂದಾಪುರ ತಾಲೂಕು
6) ಯಡಮೊಗೆ ಗ್ರಾಮಪಂಚಾಯತ್ – ಕುಂದಾಪುರ ತಾಲೂಕು
7) ಕರ್ಕುಂಜೆ – ಗ್ರಾಮಪಂಚಾಯತ್ – ಕುಂದಾಪುರ ತಾಲೂಕು