500 ಪದವಿಪೂರ್ವ ವಿದ್ಯಾರ್ಥಿಗಳನ್ನು ಉದಯೋನ್ಮುಖ ಉದ್ಯಮಿಗಳಾಗಲು ಪ್ರೋತ್ಸಾಹಿಸಿದ ಇನ್‌ಯುನಿಟಿ ಮಂಗಳೂರು

Spread the love

500 ಪದವಿಪೂರ್ವ ವಿದ್ಯಾರ್ಥಿಗಳನ್ನು ಉದಯೋನ್ಮುಖ ಉದ್ಯಮಿಗಳಾಗಲು ಪ್ರೋತ್ಸಾಹಿಸಿದ ಇನ್‌ಯುನಿಟಿ ಮಂಗಳೂರು

  • ಕರ್ನಾಟಕದಾದ್ಯಂತ ವಿಸ್ತರಿಸಲು ಸಿದ್ಧವಾಗಿರುವ ಇನ್‌ಯುನಿಟಿ ಕಾರ್ಯಕ್ರಮ

ಮಂಗಳೂರು: ಇನ್‌ಯುನಿಟಿ ಮಂಗಳೂರು, 4 ತಿಂಗಳ ಯುವ ಉದ್ಯಮಶೀಲತೆ ಕಾರ್ಯಕ್ರಮದ ಪದವಿಯ ತನ್ನ ಮೊದಲ ಸಮೂಹವನ್ನು ಮಂಗಳೂರಿನ ಓಶಿಯನ್ ಪರ್ಲ್ನಲ್ಲಿ , ಮಾರ್ಚ್ 14 ರಂದು ಆಚರಿಸುತ್ತಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಟಿಯು ಉಪಕುಲಪತಿ ಶ್ರೀ ಕರಿಸಿದ್ದಪ್ಪ, ಕರ್ನಾಟಕದ ವೈದ್ಯಕೀಯ ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ(COMEDK)ದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್, ಸಿಐಐ ಮೈಸೂರು ಮಾಜಿ ಅಧ್ಯಕ್ಷ ಪವನ್ ರಂಗ, ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಮತ್ತು ಸಿಐಐ ಮಂಗಳೂರು ಅಧ್ಯಕ್ಷರಾದ ಗೌರವ್ ಹೆಗ್ಡೆ, ಇವರು ವಹಿಸುತಿದ್ದಾರೆ.

ಉದ್ಯೋಗ ಸೃಷ್ಟಿಕರ್ತರಾಗಲು ಸಂಭಾವ್ಯ ಯುವಕರನ್ನು ಸದುಪಯೋಗಪಡಿಸಿಕೊಳ್ಳುವ ದೃಷ್ಟಿಗೆ ಅನುಗುಣವಾಗಿ, ಇನ್‌ಯುನಿಟಿ ಎಲ್ ಎಲ್ ಪಿ , ಸಮುದಾಯ ಕೇಂದ್ರಿತ ಶಿಕ್ಷಣದ ಮೂಲಕ ಉನ್ನತ ಶಿಕ್ಷಣದಲ್ಲಿ ಯುವಕರಿಗೆ ಶಿಕ್ಷಣ ನೀಡುವತ್ತ ಗಮನಹರಿಸುತ್ತ ಮುಂದಿನ ಪೀಳಿಗೆಯ ಉದ್ಯಮಿಗಳನ್ನು ಅಭಿವೃದ್ಧಿಪಡಿಸಲು ನಿರ್ಣಾಯಕವಾದ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುತಿದೆ. 4 ತಿಂಗಳ ಅವಧಿಯಲ್ಲಿ, ಮಂಗಳೂರಿನ 15 ಕಾಲೇಜುಗಳಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವುದರೊಂದಿಗೆ, 52 ವಿದ್ಯಾರ್ಥಿಗಳು ವಿವಿಧ ಸ್ಥಳೀಯ ಸವಾಲುಗಳನ್ನು ಪರಿಹರಿಸಲು ಕಾರ್ಯಸಾಧ್ಯವಾದ ಪರಿಹಾರವನ್ನು ನಿರ್ಮಿಸಲು ಸಮರ್ಥರಾಗಿರುತ್ತಾರೆ. ಈ ಕಾರ್ಯಕ್ರಮವು ಈಗ ರಾಜ್ಯದಾದ್ಯಂತ ಮತ್ತಷ್ಟು ಬೆಳವಣಿಗೆ ಮತ್ತು ವ್ಯಾಪಕ ಅಳವಡಿಕೆಗೆ ಸಿದ್ಧವಾಗಿದೆ.

ಇನ್‌ಯುನಿಟಿ ಪೈಲಟ್ ಪ್ರೋಗ್ರಾಂ, ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟರ್‌ಪ್ರೆನ್ಯೂರ್‌ಶಿಪ್ (GAME) ಮತ್ತು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಮಂಗಳೂರು, ಸ್ಥಳೀಯ ಸವಾಲುಗಳನ್ನು ಪರಿಹರಿಸಲು ಮಂಗಳೂರು ಪ್ರದೇಶದಾದ್ಯಂತ ಉದ್ಯಮಶೀಲ ಯುವಕರನ್ನು ಗುರುತಿಸುವ ದೃಷ್ಟಿಯೊಂದಿಗೆ ಇದನ್ನು ಸೆಪ್ಟೆಂಬರ್ 2021 ರಲ್ಲಿ ಪ್ರಾರಂಭಿಸಿತು. ಸಿಂಜೆಂತಾ ಫೌಂಡೇಶನ್, ಕಾಲೇಜ್ ಆಫ್ ಫಿಶರೀಸ್, ಮೀನುಗಾರಿಕೆ ಇಲಾಖೆ ಮತ್ತು ದಕ್ಷಿಣ ಕನ್ನಡದ ಕೃಷಿ ವಿಜ್ಞಾನ ಕೇಂದ್ರದಂತಹ ಪ್ರಮುಖ ಸಂಸ್ಥೆಗಳು ಪರಿಹಾರ ಅಗತ್ಯವಿರುವ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ಇನ್‌ಯುನಿಟಿಯೊಂದಿಗೆ ಸಹಕರಿಸಿದವು.

ಈ ಸಮೂಹವು ಯುವ ಉದಯೋನ್ಮುಖ ಉದ್ಯಮಿಗಳ ಸಾಧನೆಗಳನ್ನು ಗುರುತಿಸಿ ಸ್ಥಳೀಯ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುವ ಮಾದರಿಯನ್ನು ಯಶಸ್ವಿಯಾಗಿ ರಚಿಸಿದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ನಡೆಸಲಿರುವುದು. ಈ ಕಾರ್ಯಕ್ರಮವು ಯುವ ಉದ್ಯಮಶೀಲತೆಯ ಯಶಸ್ಸಿನ ಸಾಮರ್ಥ್ಯದ ಬಗ್ಗೆ ನಿರೂಪಣೆಯನ್ನು ವಿಸ್ತರಿಸುತ್ತದೆ ಮತ್ತು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರನ್ನಾಗಿಸಿ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥರನ್ನಾಗಿಸುವ ಶಕ್ತಿಯನ್ನು ನೀಡುತ್ತದ.

ಹೆಚ್ಚಿನ ವಿವರಗಳಿಗಾಗಿ: Ms Hithaishy B (events@inunity.in, 9449845968)


Spread the love