Home Uncategorized ಎಂಟು ವಿಮಾನ ನಿಲ್ದಾಣಗಳಲ್ಲಿ ಹೊಸ ತಲೆಮಾರಿನ ‘ಅದಾನಿ ರಿವಾರ್ಡ್ಸ್’ ಸದಸ್ಯತ್ವ ಯೋಜನೆ ಪ್ರಕಟಿಸಿದ ಅದಾನಿ ಏರ್‌ಪೋರ್ಟ್ಸ್...

ಎಂಟು ವಿಮಾನ ನಿಲ್ದಾಣಗಳಲ್ಲಿ ಹೊಸ ತಲೆಮಾರಿನ ‘ಅದಾನಿ ರಿವಾರ್ಡ್ಸ್’ ಸದಸ್ಯತ್ವ ಯೋಜನೆ ಪ್ರಕಟಿಸಿದ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್

Spread the love

ಎಂಟು ವಿಮಾನ ನಿಲ್ದಾಣಗಳಲ್ಲಿ ಹೊಸ ತಲೆಮಾರಿನ ‘ಅದಾನಿ ರಿವಾರ್ಡ್ಸ್’ ಸದಸ್ಯತ್ವ ಯೋಜನೆ ಪ್ರಕಟಿಸಿದ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್

ಮಂಗಳೂರು: ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಯಾಗಿರುವ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL), ತನ್ನ ಎಂಟು ವಿಮಾನ ನಿಲ್ದಾಣಗಳಲ್ಲಿ ಹೊಸ ತಲೆಮಾರಿನ ‘ಅದಾನಿ ರಿವಾರ್ಡ್ಸ್’ ಸದಸ್ಯತ್ವ ಯೋಜನೆಯನ್ನು ಪರಿಚಯಿಸಿದೆ. ವಾರ್ಷಿಕ 10 ಕೋಟಿಗೂ ಅಧಿಕ ಪ್ರಯಾಣಿಕರ ಪ್ರಯಾಣವನ್ನು ನಿರ್ವಹಿಸುವ ಸಂಸ್ಥೆಯು, ವಿಮಾನ ಪ್ರಯಾಣ, ಆಹಾರ, ಶಾಪಿಂಗ್, ಲಾಂಜ್ ಪ್ರವೇಶ ಸೇರಿದಂತೆ ವಿಮಾನ ನಿಲ್ದಾಣದ ವಿವಿಧ ಸೇವೆಗಳನ್ನು ಒಂದೇ ಸದಸ್ಯತ್ವದಡಿ ಒದಗಿಸುವ ಉದ್ದೇಶ ಹೊಂದಿದೆ.

AAHLನ ಡಿಜಿಟಲ್ ವೇದಿಕೆಯಾಗಿರುವ ‘ಅದಾನಿ ಒನ್ ಆ್ಯಪ್’ಗೆ ಸಂಯೋಜಿತವಾಗಿರುವ ಈ ಯೋಜನೆಯ ಮೂಲಕ ಪ್ರಯಾಣಿಕರು ವಿವಿಧ ಕೊಡುಗೆಗಳನ್ನು ತಿಳಿದುಕೊಳ್ಳಬಹುದು, ರಿವಾರ್ಡ್‌ಗಳನ್ನು ಪಡೆದುಕೊಳ್ಳಬಹುದು ಹಾಗೂ ವಿಮಾನ ನಿಲ್ದಾಣದ ಆಯ್ದ ಸೇವೆಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ಈ ಹೊಸ ಯೋಜನೆಯು ಈ ಹಿಂದೆ ಪರಿಚಯಿಸಲಾಗಿದ್ದ ‘ಅದಾನಿ ರಿವಾರ್ಡ್ಸ್ 1.0’ನ ಯಶಸ್ಸಿನ ಮುಂದುವರಿದ ಭಾಗವಾಗಿದೆ. ಹಿಂದಿನ ಯೋಜನೆಯಡಿ 70 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದರು. ಇದೀಗ ಪ್ರಯಾಣಿಕರ ಅಗತ್ಯತೆ ಮತ್ತು ಖರೀದಿ ಆದ್ಯತೆಗಳಿಗೆ ಅನುಗುಣವಾಗಿ ವಿವಿಧ ಹಂತಗಳ ಸದಸ್ಯತ್ವ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಸದಸ್ಯರು ವಾರ್ಷಿಕ ₹65,000 ಮೌಲ್ಯದವರೆಗಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಎಂಟು ವಿಮಾನ ನಿಲ್ದಾಣಗಳಲ್ಲಿ ವಿವಿಧ ವಿಶೇಷ ಸೌಲಭ್ಯಗಳು

ಸದಸ್ಯತ್ವದ ಹಂತಕ್ಕೆ ಅನುಗುಣವಾಗಿ ಪ್ರಯಾಣಿಕರು ಆಹಾರ, ಶಾಪಿಂಗ್, ಪ್ರಯಾಣ ಮತ್ತು ಆತಿಥ್ಯ ಸೇವೆಗಳಿಗೆ ಸಂಬಂಧಿಸಿದ ಹಲವು ಸೌಲಭ್ಯಗಳನ್ನು ಪಡೆಯಬಹುದು.

ಆಹಾರ ಮತ್ತು ಶಾಪಿಂಗ್: ಆಯ್ದ ಆಹಾರ ಮತ್ತು ಪಾನೀಯ ಮಳಿಗೆಗಳು ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ, ವಿಶೇಷ ಕೊಡುಗೆಗಳು ಮತ್ತು ಉಡುಗೊರೆ ವೋಚರ್‌ಗಳು.
ಡ್ಯೂಟಿ ಫ್ರೀ ಖರೀದಿ: ಆಯ್ದ ಡ್ಯೂಟಿ ಫ್ರೀ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ಮತ್ತು ಕೊಡುಗೆಗಳು.
ಲಾಂಜ್ ಸೌಲಭ್ಯ: ಸದಸ್ಯತ್ವದ ಹಂತಕ್ಕೆ ಅನುಗುಣವಾಗಿ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಉಚಿತ ಪ್ರವೇಶ.
ಆದ್ಯತೆಯ ಸೇವೆಗಳು: ವಿಶೇಷ ಪ್ರವೇಶ ದ್ವಾರಗಳು, ಆದ್ಯತೆಯ ಭದ್ರತಾ ತಪಾಸಣೆ ಮತ್ತು ಆದ್ಯತೆಯ ಗ್ರಾಹಕ ಸೇವೆ.
ಪಾರ್ಕಿಂಗ್ ಮತ್ತು ಸಂಚಾರ: ಆದ್ಯತೆಯ ಪಾರ್ಕಿಂಗ್, ವ್ಯಾಲೆಟ್ ಸೇವೆ ಹಾಗೂ ಟರ್ಮಿನಲ್ ಒಳಗಿನ ಸಂಚಾರಕ್ಕೆ ನೆರವು.
ವೈಯಕ್ತಿಕ ಸಹಾಯ: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶೇಷ ನೆರವು ಒದಗಿಸುವ ‘ಪ್ರಣಾಮ್ ಮೀಟ್ ಅಂಡ್ ಗ್ರೀಟ್’ ಸೇವೆ.

ಈ ಸೌಲಭ್ಯಗಳು ಮುಂಬೈ, ನವಿ ಮುಂಬೈ, ಅಹಮದಾಬಾದ್, ಲಖನೌ, ಜೈಪುರ, ಗುವಾಹಟಿ, ಮಂಗಳೂರು ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿದ್ದು, ಸದಸ್ಯತ್ವದ ಹಂತಕ್ಕೆ ಅನುಗುಣವಾಗಿ ಸೌಲಭ್ಯಗಳು ಬದಲಾಗುತ್ತವೆ.

ಈ ಕುರಿತು ಮಾತನಾಡಿದ AAHLನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶ್ರೀ ಅರುಣ್ ಬನ್ಸಾಲ್ ಅವರು, “ಅದಾನಿ ರಿವಾರ್ಡ್ಸ್ 1.0 ಯೋಜನೆಯಡಿ 70 ಲಕ್ಷ ಪ್ರಯಾಣಿಕರು ಸದಸ್ಯತ್ವ ಪಡೆದಿರುವುದು, ವಿಮಾನ ನಿಲ್ದಾಣಗಳೊಂದಿಗೆ ಹೆಚ್ಚು ನಿಕಟ ಮತ್ತು ಸಂಪರ್ಕಿತ ಅನುಭವ ಹೊಂದಲು ಪ್ರಯಾಣಿಕರು ಆಸಕ್ತಿ ಹೊಂದಿರುವುದನ್ನು ತೋರಿಸುತ್ತದೆ. ಹೊಸ ತಲೆಮಾರಿನ ಸದಸ್ಯತ್ವ ಯೋಜನೆಯು ಈ ಯಶಸ್ಸನ್ನು ಮುಂದುವರಿಸುವುದರ ಜೊತೆಗೆ ಪ್ರಯಾಣ, ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಆತಿಥ್ಯ ಸೇವೆಗಳನ್ನು ನಮ್ಮ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.

ವಿಮಾನ ನಿಲ್ದಾಣವೆಂದರೆ ಕೇವಲ ವಿಮಾನ ಹತ್ತುವ ಮತ್ತು ಇಳಿಯುವ ಸ್ಥಳವಷ್ಟೇ ಅಲ್ಲ ಎಂಬ ಅನುಭವವನ್ನು ಪ್ರಯಾಣಿಕರಿಗೆ ನೀಡುವುದು ನಮ್ಮ ಉದ್ದೇಶ. ಅದಾನಿ ಒನ್ ಆ್ಯಪ್‌ನ ಅನುಕೂಲದೊಂದಿಗೆ ವಿಮಾನ ನಿಲ್ದಾಣದ ವಿವಿಧ ಸೇವೆಗಳಿಗೆ ಸಂಬಂಧಿಸಿದ ವಿಶೇಷ ಪ್ರಯೋಜನಗಳನ್ನು ಒದಗಿಸುವ ಮೂಲಕ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ನಾವು ಬಯಸುತ್ತೇವೆ. ಇದು ಡಿಜಿಟಲ್ ಸೇವೆಗಳ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ವಿಮಾನ ನಿಲ್ದಾಣಗಳ ವಾಯುಯಾನೇತರ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ” ಎಂದು ತಿಳಿಸಿದರು.

ಅದಾನಿ ಒನ್ ಆ್ಯಪ್ ಮೂಲಕ ಸಮಗ್ರ ಡಿಜಿಟಲ್ ಅನುಭವ
ಪ್ರಸ್ತುತ AAHLನ ವಾಯುಯಾನೇತರ ವಾಣಿಜ್ಯ ಮಾರಾಟದಲ್ಲಿ ಡಿಜಿಟಲ್ ವಹಿವಾಟುಗಳ ಪಾಲು ಸುಮಾರು ಶೇ. 25ರಷ್ಟಿದೆ. ಹೊಸ ಸದಸ್ಯತ್ವ ಯೋಜನೆಯು ಪ್ರಯಾಣಿಕರಿಗೆ ವಿವಿಧ ಕೊಡುಗೆಗಳನ್ನು ಸುಲಭವಾಗಿ ತಿಳಿದುಕೊಳ್ಳಲು, ರಿವಾರ್ಡ್ಸ್ ಪಡೆದುಕೊಳ್ಳಲು ಹಾಗೂ ವಿಮಾನ ನಿಲ್ದಾಣದ ಸೇವೆಗಳನ್ನು ಮುಂಗಡವಾಗಿ ಯೋಜಿಸಲು ಅವಕಾಶ ಕಲ್ಪಿಸುವ ಮೂಲಕ ಡಿಜಿಟಲ್ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಅದಾನಿ ಒನ್ ಆ್ಯಪ್ ಮೂಲಕ ಡ್ಯೂಟಿ ಫ್ರೀ, ಆಹಾರ ಮತ್ತು ಪಾನೀಯ ಮಳಿಗೆಗಳು, ಲಾಂಜ್‌ಗಳು, ಶಾಪಿಂಗ್, ಪಾರ್ಕಿಂಗ್ ಸೇರಿದಂತೆ ವಿಮಾನ ನಿಲ್ದಾಣದ ವಿವಿಧ ಸೇವೆಗಳನ್ನು ಪ್ರವೇಶಿಸಬಹುದು. ಸದಸ್ಯರು ತಮ್ಮ ಸದಸ್ಯತ್ವದ ಹಂತ, ಲಭ್ಯವಿರುವ ರಿವಾರ್ಡ್ಸ್ ಮತ್ತು ವಿವಿಧ ವಿಮಾನ ನಿಲ್ದಾಣಗಳಲ್ಲಿನ ವಿಶೇಷ ಕೊಡುಗೆಗಳ ಮಾಹಿತಿಯನ್ನೂ ಪಡೆದುಕೊಳ್ಳಬಹುದು. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲೇ ಆಯ್ದ ಖರೀದಿ ಮತ್ತು ಸೇವೆಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶವೂ ಇದೆ.

ಈ ಯೋಜನೆಯು ವಿಮಾನ ನಿಲ್ದಾಣಗಳಲ್ಲಿನ ಶಾಪಿಂಗ್, ಆಹಾರ ಮತ್ತು ಇತರ ವಾಣಿಜ್ಯ ಸೇವೆಗಳಲ್ಲಿ ಪ್ರಯಾಣಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ಗ್ರಾಹಕರೊಂದಿಗೆ ದೀರ್ಘಕಾಲೀನ ಸಂಬಂಧ ಬೆಳೆಸಲು AAHLಗೆ ನೆರವಾಗಲಿದೆ. ವಿಮಾನ ಪ್ರಯಾಣವನ್ನು ಮೀರಿದ ವೈವಿಧ್ಯಮಯ ಸೇವೆಗಳು ಮತ್ತು ಅನುಭವಗಳನ್ನು ಒದಗಿಸುವ ಸಮಗ್ರ ತಾಣಗಳನ್ನಾಗಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಯ ಕಾರ್ಯತಂತ್ರಕ್ಕೂ ಈ ಯೋಜನೆ ಪೂರಕವಾಗಲಿದೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version