ಮಂಗಳೂರು ಪಾದ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಪ್ರಕರಣ ದಾಖಲು
ಮಂಗಳೂರು: ನಗರದ ಚರ್ಚ್ ವೊಂದರ ಧರ್ಮಗುರು ವಿರುದ್ಧ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಸಂತ್ರಸ್ತ ಬಾಲಕರು ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕರು ಪ್ರಾರ್ಥನೆಗೆ ತೆರಳಿದ್ದ ವೇಳೆ ನಗರದ ಚರ್ಚ್ ವೊಂದರ ಧರ್ಮಗುರು ಬಾಲಕರಿಗೆ ಚಾಕಲೇಟ್ ಕೊಟ್ಟು ಅವರ ಗುಪ್ತಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ಇದೇ ರೀತಿ ತನ್ನ ಸ್ನೇಹಿತರಿಗೂ ಕೂಡ ನೀಡಿರುತ್ತಾರೆ ಎಂದು ತಿಳಿದು ಬಂದಿದೆ. ಚರ್ಚಿನ ಧರ್ಮಗುರು ನಿರಂತರವಾಗಿ ಮಾಡಿದ ಲೈಂಗಿಕ ಕಿರುಕುಳದ ಬಗ್ಗೆ ಹೆದರಿದ ಬಾಲಕರು ಸದರಿ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿ ಪೋಷಕರೊಂದಿಗೆ ತೆರಳಿ ಬಿಷಪ್ ಅವರಿಗೆ ತಿಳಿಸಿದ್ದು ಈ ಬಗ್ಗೆ ದೂರನ್ನು ನೀಡುವಂತೆ ಸೂಚಿಸಿದ ನಂತರ ತಡವಾಗಿ ದೂರು ನೀಡಲಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ದೂರು ಸ್ವೀಕರಿಸಿರುವ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
