Home Mangalorean News Kannada News ಅಡಿಕೆ, ರಬ್ಬ‌ರ್, ಕಾಳುಮೆಣಸು ಧಾರಣೆ ಏರಿಕೆ: 500 ರೂ. ಗಡಿಯತ್ತ ಹೊಸ ಅಡಿಕೆ ಧಾರಣೆ

ಅಡಿಕೆ, ರಬ್ಬ‌ರ್, ಕಾಳುಮೆಣಸು ಧಾರಣೆ ಏರಿಕೆ: 500 ರೂ. ಗಡಿಯತ್ತ ಹೊಸ ಅಡಿಕೆ ಧಾರಣೆ

Spread the love

ಅಡಿಕೆ, ರಬ್ಬ‌ರ್, ಕಾಳುಮೆಣಸು ಧಾರಣೆ ಏರಿಕೆ: 500 ರೂ. ಗಡಿಯತ್ತ ಹೊಸ ಅಡಿಕೆ ಧಾರಣೆ

ಮಂಗಳೂರು: ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಧಾರಣೆ ಏರುಮುಖದತ್ತ ಸಾಗಿದ್ದು ಹೊಸ ಅಡಿಕೆ ಧಾರಣೆ ಸದ್ಯದಲ್ಲೇ 500 ರೂ. ಗಡಿ ತಲುಪುವ ನಿರೀಕ್ಷೆ ಮೂಡಿಸಿದೆ.ಹೊಸ ಅಡಿಕೆ, ಸಿಂಗಲ್ ಚೋಲ್, ರಬ್ಬರ್, ಕಾಳುಮೆಣಸು ಧಾರಣೆಯಲ್ಲಿ ಏರಿಕೆ ಕಂಡು ಬಂದಿದ್ದು ಹೊಸ ವರ್ಷದಲ್ಲಿ ಇನ್ನಷ್ಟು ಹೆಚ್ಚಳದ ಸಾಧ್ಯತೆ ಕಂಡು ಬಂದಿದೆ.

ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯು 480 ರೂ.ಗೆ ತಲುಪಿದರೆ ಹೊರ ಮಾರುಕಟ್ಟೆಯಲ್ಲಿ 485 ರೂ. ತನಕವೂ ಇತ್ತು. ಫೆ. 7ರಂದು 460 ರೂ. ಇದ್ದ ಧಾರಣೆ ತಲಾ 10 ರೂ. ನಂತೆ ಒಟ್ಟು 20 ರೂ. ಹೆಚ್ಚಳಗೊಂಡು 480 ರೂ.ಗಳಿಗೆ ತಲಪಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಸದ್ಯದಲ್ಲೇ 500 ರೂ.ಗಳನ್ನು ತಲುಪುವ ಸಾಧ್ಯತೆಯಿದೆ. ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆ ಒಂದೇ ತೆರನಾಗಿ ಇದ್ದು ಫೆ. 7ಕ್ಕೆ 535 ರೂ. ಇದ್ದ ಧಾರಣೆ ಫೆ.12ಕ್ಕೆ 550 ರೂ.ಗಳಿಗೆ ತಲುಪಿದೆ. ಹೊರ ಮಾರುಕಟ್ಟೆಯಲ್ಲಿ 555 ರೂ. ತನಕವೂ ಬೇಡಿಕೆ ಕಂಡುಬಂದಿದೆ.

ರಬ್ಬರ್‌ಧಾರಣೆಯಲ್ಲಿಯೂ 2 ದಿನಗಳಲ್ಲಿ 2 ರೂ. ನಷ್ಟು ಹೆಚ್ಚಳ ಕಂಡು ಬಂದಿದೆ. ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಫೆ.12ರಂದು ರಬ್ಬರ್‌ಗೆÀàಡ್‌ ಗೆ 205 ರೂ. ಇದ್ದರೆ, ರಬ್ಬರ್‌ಸ್‌ಕ್ರಾಪ್‌ಗೆ 129 ರೂ. ಇತ್ತು. ಕಾಳುಮೆಣಸು ಧಾರಣೆ 700 ರೂ. ಗಡಿ ತಲಪಿದೆ. ಕಳೆದ ಕೆಲವು ಸಮಯಗಳಿಂದ ಸ್ಥಿರವಾಗಿದ್ದ ಧಾರಣೆ ಚೇತರಿಕೆಯತ್ತ ಮುಖ ಮಾಡಿದೆ. ಫೆ. 7ರಂದು ಕೆ.ಜಿ.ಗೆ 685 ರೂ. ಇದ್ದು ಫೆ. 12ರಂದು 700 ರೂ.ಗೆ ತಲುಪಿದೆ. ಕ್ಯಾಂಸ್ಕೋ ಸಹಿತ ಇನ್ನಿತರ ಕೃಷಿ ಉತ್ಪನ್ನಗಳ ಖರೀದಿ ಸಂಸ್ಥೆಗಳಿಗೆ ಹೋಲಿಸಿದರೆ ಹೊರ ಮಾರುಕಟ್ಟೆಗಳಲ್ಲಿಯೇ ಅಡಿಕೆ, ಕರಿಮೆಣಸು, ರಬ್ಬರ್‌ಧಾರಣೆ ಹೆಚ್ಚಿದ್ದು ಬೆಳೆಗಾರರ ಫೇವರಿಟ್ ಕೇಂದ್ರವೆನಿಸಿದೆ.


Spread the love

Exit mobile version