ಗಾಂಜಾ ಸಾಗಾಟ ಯತ್ನ: ಆರೋಪಿಯ ಬಂಧನ, ₹1.56 ಲಕ್ಷ ಮೌಲ್ಯದ ಮಾದಕ ವಸ್ತು ವಶ
ಮಂಗಳೂರು: ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕಾವೂರು ಪೊಲೀಸರು, ಸುಮಾರು ₹1,56,000 ಮೌಲ್ಯದ 3 ಕೆಜಿ 138 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮೇ 13, 2026ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಸಮೀಪ, ಮೇರಿಹಿಲ್ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಎಡಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಇರ್ಷಾದ್ @ ಇರ್ಷಾ (26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆತ ಉಳ್ಳಾಲ ತಾಲೂಕಿನ ಮುಕ್ಕಚೇರಿ ಹಿಲರಿಯ ನಗರ ನಿವಾಸಿಯಾಗಿದ್ದು, ದಿ. ಕೆ.ಕೆ. ಇಕ್ಬಾಲ್ ಅವರ ಪುತ್ರ ಎಂದು ತಿಳಿದುಬಂದಿದೆ.
ಆರೋಪಿತನ ಬಳಿ ಇದ್ದ ಸುಮಾರು 3 ಕೆಜಿ 138 ಗ್ರಾಂ ತೂಕದ ಗಾಂಜಾ ಮಾದಕ ವಸ್ತು, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್, ಸ್ಕೂಟರ್ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 74/2026ರಡಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(c) ಮತ್ತು 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಣಂಬೂರು ಎಸಿಪಿ ತಂಡ ಹಾಗೂ ಕಾವೂರು ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿತನ ವಿರುದ್ಧ ಈ ಹಿಂದೆ ಕೂಡ ಕೆಳಕಂಡ ಪ್ರಕರಣಗಳು ದಾಖಲಾಗಿವೆ:
- ಉಳ್ಳಾಲ ಪೊಲೀಸ್ ಠಾಣೆ ಅ.ಕ್ರ. 106/2019 – ಕಲಂ 307 ಐಪಿಸಿ ಹಾಗೂ ಆರ್ಮ್ಸ್ ಆಕ್ಟ್.
- ಮಂಗಳೂರು ಸಿಎಸ್ಪಿ ಪೊಲೀಸ್ ಠಾಣೆ ಕ್ರೈಂ ನಂ. 06/2024 – ಕಲಂ 8(c), 20(b) ಎನ್ಡಿಪಿಎಸ್ ಕಾಯ್ದೆ.
