Home Mangalorean News Kannada News ಪರಂಗೀಪೇಟೆ ಕೆನರಾ ಬ್ಯಾಂಕ್‌ ನಲ್ಲಿ ಕಳ್ಳತನಕ್ಕೆ ಯತ್ನ 

ಪರಂಗೀಪೇಟೆ ಕೆನರಾ ಬ್ಯಾಂಕ್‌ ನಲ್ಲಿ ಕಳ್ಳತನಕ್ಕೆ ಯತ್ನ 

Spread the love

ಪರಂಗೀಪೇಟೆ ಕೆನರಾ ಬ್ಯಾಂಕ್‌ ನಲ್ಲಿ ಕಳ್ಳತನಕ್ಕೆ ಯತ್ನ 

ಬಂಟ್ವಾಳ : ಪರಂಗೀಪೇಟೆಯ ಮೆನೆಜಸ್ ಪ್ಲಾಜಾ ಕಾಂಪ್ಲೆಕ್ಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.ಜುಲೈ 12ರ ರಾತ್ರಿ ದುಷ್ಕರ್ಮಿಗಳು ಬ್ಯಾಂಕಿನ ಮೇಲ್ಛಾವಣಿಯನ್ನು ತುಂಡರಿಸಿ ಒಳನುಗ್ಗಿದ್ದಾರೆ. ಇಂದು ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಶಾಖೆ ತೆರೆದ ವೇಳೆ ಘಟನೆ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರ ತಂಡ ಹಾಗೂ SOCO ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕಿನಿಂದ ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳು ಕಳುವಾಗಿಲ್ಲ ಎಂದು ತಿಳಿದುಬಂದಿದೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love

Exit mobile version