29.5 C
Mangalore
Wednesday, September 27, 2023
Home Authors Posts by Lavakumar Kaggodlu

Lavakumar Kaggodlu

684 Posts 0 Comments

ಈ ಬಾರಿ ಸಾಂಪ್ರದಾಯಿಕ ಮೈಸೂರು ದಸರಾ – ಹೆಚ್.ಸಿ.ಮಹದೇವಪ್ಪ

ಈ ಬಾರಿ ಸಾಂಪ್ರದಾಯಿಕ ಮೈಸೂರು ದಸರಾ - ಹೆಚ್.ಸಿ.ಮಹದೇವಪ್ಪ ಮೈಸೂರು: ರಾಜ್ಯದಲ್ಲಿ ಬರ ತಾಂಡವವಾಡುತ್ತಿರುವುದರಿಂದ ಅದ್ಧೂರಿ ದಸರಾ ಬದಲಿಗೆ ಸಾಂಪ್ರದಾಯಿಕ ದಸರಾ ಆಚರಣೆಗೆ ತೀರ್ಮಾನಿಸಲಾಗಿದೆ. ಮೈಸೂರು ಅರಮನೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಆಚರಣೆಯ ಕುರಿತು ಪೂರ್ವ...

ಚರ್ಮರೋಗದಿಂದ ಬಳಲುತ್ತಿರುವ ಮಕ್ಕಳ ಪರಿಶೀಲನೆ

ಚರ್ಮರೋಗದಿಂದ ಬಳಲುತ್ತಿರುವ ಮಕ್ಕಳ ಪರಿಶೀಲನೆ ಚಾಮರಾಜನಗರ: ವಿರಳ ಚರ್ಮ ರೋಗ ಪತ್ತೆಯಾಗಿರುವ ಹನೂರು ತಾಲೂಕಿನ ಕುರಟ್ಟಿ ಹೊಸೂರು ಹಾಗೂ ಭದ್ರಯ್ಯನಹಳ್ಳಿ ಗ್ರಾಮಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭೇಟಿ...

ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಖಾದರ್

ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಖಾದರ್ ಮೈಸೂರು: ಮೈಸೂರಿನ ಸರಸ್ವತಿಪುರದಲ್ಲಿರುವ ಶ್ರೀ ಕೃಷ್ಣ ಧಾಮಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಭೇಟಿ ನೀಡಿ ಚಾತುರ್ಮಾಸ್ಯ ವ್ರತದಲ್ಲಿರುವ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ...

ಪ್ರೇಮಿಗಳಿಂದ ಆತ್ಮಹತ್ಯೆಗೆ ಯತ್ನ: ಪ್ರಿಯಕರ ಸಾವು

ಪ್ರೇಮಿಗಳಿಂದ ಆತ್ಮಹತ್ಯೆಗೆ ಯತ್ನ: ಪ್ರಿಯಕರ ಸಾವು ಚಾಮರಾಜನಗರ: ಪ್ರಸಿದ್ಧ ಪ್ರವಾಸಿ ಕೇಂದ್ರವಾದ ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿ, ಪ್ರಿಯಕರ ಸಾವನ್ನಪ್ಪಿ, ಪ್ರಿಯತಮೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ. ಕನಕಪುರ ಮೂಲದ  ಉಮೇಶ್(24) ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದರೆ, ಯುವಕನಾಗಿದ್ದು, 16 ವರ್ಷದ ಚಾಮುಂಡಿಪುರದ ಬಾಲಕಿ ಗಂಭೀರ  ಸ್ಥಿತಿಯಲ್ಲಿದ್ದು ತಮಿಳುನಾಡಿನ ಧರ್ಮಪುರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಮೇಶ್ ಹಾಗೂ ಬಾಲಕಿ ಕನಕಪುರ ಮೂಲದವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಹೊಗೆನಕಲ್ ಜಲಪಾತದ ಬಂಡೆಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇವರಿಬ್ಬರು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಾಲಕಿ ಮತ್ತು ಉಮೇಶ್ನನ್ನು ಚಿಕಿತ್ಸೆಗಾಗಿ ಪೆನ್ನಾಗರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಯುವಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಧರ್ಮಪುರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಗೇನೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಅಪ್ಪು ಅಭಿಮಾನಿಯಿಂದ ಸೈಕಲ್ ನಲ್ಲಿ ದೇಶ ಪರ್ಯಟನೆ

ಅಪ್ಪು ಅಭಿಮಾನಿಯಿಂದ ಸೈಕಲ್ ನಲ್ಲಿ ದೇಶ ಪರ್ಯಟನೆ ಗುಂಡ್ಲುಪೇಟೆ: ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾದ ತಮಿಳುನಾಡಿನ ಯುವಕನೊಬ್ಬ ಒಂದೂವರೆ ವರ್ಷದಿಂದ ದೇಶಾದ್ಯಂತ ಸೈಕಲ್ ಸವಾರಿ ಮಾಡುತ್ತಿದ್ದು, ಈ ಪ್ರಯಾಣವನ್ನು ಅಪ್ಪು ಅವರಿಗೆ ಸಮರ್ಪಿಸಿರುವುದು...

ದುಸ್ಥಿಯಲ್ಲಿರುವ ನಾಲೆಗಳತ್ತ ಎಚ್ಚರಿಕೆ ವಹಿಸುವುದು ಅಗತ್ಯ

ದುಸ್ಥಿಯಲ್ಲಿರುವ ನಾಲೆಗಳತ್ತ ಎಚ್ಚರಿಕೆ ವಹಿಸುವುದು ಅಗತ್ಯ ಕೃಷ್ಣರಾಜಪೇಟೆ: ಈ ಬಾರಿ ಮುಂಗಾರು ಕೈಕೊಟ್ಟಿದೆ. ಹೀಗಾಗಿ ಬಹುತೇಕ ಕೆರೆಕಟ್ಟೆಗಳು ತುಂಬಲೇ ಇಲ್ಲ. ಇನ್ನೊಂದೆಡೆ ನದಿಯ ನೀರನ್ನು ನಾಲೆಗಳ ಮೂಲಕ ಗದ್ದೆಗಳಿಗೆ ನೀರು ಹಾಯಿಸುತ್ತಿದ್ದರೂ ಕೆಲವು ನಾಲೆಗಳು...

ವಿಷಕಾರಿ ಹಣ್ಣು ಎಂಟು ಮಕ್ಕಳು ಅಸ್ವಸ್ಥ

ವಿಷಕಾರಿ ಹಣ್ಣು ಎಂಟು ಮಕ್ಕಳು ಅಸ್ವಸ್ಥ ಗುಂಡ್ಲುಪೇಟೆ : ಆಟದ ಮೈದಾನದ ಬಳಿಯಿದ್ದ ವಿಷಕಾರಿ ಹಣ್ಣುಗಳನ್ನು ತಿಂದು ಎಂಟು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ವಿಷಕಾರಿ ಹಣ್ಣು ತಿಂದು ಅಸ್ವಸ್ಥಗೊಂಡ ಮಕ್ಕಳನ್ನು ಕಂಡ ಪೋಷಕರು...

ಬಿ.ಆರ್.ಹಿಲ್ಸ್ ನಲ್ಲಿ ಹುಲಿ ಸಾವಿಗೆ ಕಾರಣವೇನು?

ಬಿ.ಆರ್.ಹಿಲ್ಸ್ ನಲ್ಲಿ ಹುಲಿ ಸಾವಿಗೆ ಕಾರಣವೇನು? ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಮಂಗಳವಾರ ಹುಲಿಯೊಂದರ ಕಳೇಬರ ಪತ್ತೆಯಾಗಿದೆ. ಬೈಲೂರು ವಲಯದ ಬೆಳ್ಳಾಜೆ ಬೀಟ್ ವ್ಯಾಪ್ತಿಯ ಅತ್ತಿಕಾನೆ ಕಾಫಿ ಎಸ್ಟೇಟ್‌ನಲ್ಲಿ ಮೃತದೇಹ...

ಸಾಲೂರಿನಲ್ಲಿ ಏಳು ಜೋಡಿಗಳು ಒಂದಾಗಿದ್ದು ಹೇಗೆ?

ಸಾಲೂರಿನಲ್ಲಿ ಏಳು ಜೋಡಿಗಳು ಒಂದಾಗಿದ್ದು ಹೇಗೆ? ಚಾಮರಾಜನಗರ: ಸಾಮೂಹಿಕ ವಿವಾಹಕ್ಕೆ ಇದುವರೆಗೂ ಮೂಹೂರ್ತ ಕೂಡಿ ಬಾರದ ಹಿನ್ನಲೆಯಲ್ಲಿ ಬೇಸತ್ತ ಏಳು ಜೋಡಿಗಳು ತಮ್ಮ ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿರುವ ಘಟನೆ ರಾಜ್ಯದ ಪ್ರಸಿದ್ಧ ಯಾತ್ರಾ...

ಮಂಡ್ಯ ರಮೇಶ್ ಸ್ವಚ್ಛ ಸರ್ವೇಕ್ಷಣ್ ರಾಯಭಾರಿ

ಮಂಡ್ಯ ರಮೇಶ್ ಸ್ವಚ್ಛ ಸರ್ವೇಕ್ಷಣ್ ರಾಯಭಾರಿ ಮೈಸೂರು: 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ರಾಯಭಾರಿಯಾಗಿ ನಿಯೋಜನೆಗೊಂಡಿರುವ ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಅವರನ್ನು ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಆಹ್ವಾನಿಸಲಾಯಿತು. ಮೇಯರ್...