Home Mangalorean News Kannada News ಬೈಕಿಗೆ ಡಿಕ್ಕಿಯಾದ ಆಟೋ ರಿಕ್ಷಾ : ನಿವೃತ್ತ ಶಿಕ್ಷಕ ಜಿ ಕೆ ಭಟ್ ನಿಧನ

ಬೈಕಿಗೆ ಡಿಕ್ಕಿಯಾದ ಆಟೋ ರಿಕ್ಷಾ : ನಿವೃತ್ತ ಶಿಕ್ಷಕ ಜಿ ಕೆ ಭಟ್ ನಿಧನ

Spread the love

ಬೈಕಿಗೆ ಡಿಕ್ಕಿಯಾದ ಆಟೋ ರಿಕ್ಷಾ : ನಿವೃತ್ತ ಶಿಕ್ಷಕ ಜಿ ಕೆ ಭಟ್ ನಿಧನ

ಮೂಡುಬಿದಿರೆ: ಪೇಟೆಯ ರತನ್ ಗ್ಯಾರೇಜ್ ಸಮೀಪ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೇಣುಗೋಪಾಲ ಕಾಲೋನಿ ನಿವಾಸಿ, ನಿವೃತ್ತ ಶಿಕ್ಷಕ ಜಿ.ಕೆ. ಭಟ್ (ಗೋಪಾಲ ಕೃಷ್ಣ ಭಟ್) ಮೃತಪಟ್ಟಿದ್ದಾರೆ.

 

ಮೂಡುಬಿದಿರೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾದಲ್ಲಿ ಜಿ.ಕೆ. ಭಟ್ ಇತರ ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಆಟೋ ರಿಕ್ಷಾ ಬೈಕ್ಗೆ ಡಿಕ್ಕಿಯಾಗಿದ್ದನ್ನು ತಪ್ಪಿಸಲು ರಿಕ್ಷಾ ಚಾಲಕ ಬ್ರೇಕ್ ಹಾಕಿದಾಗ ರಿಕ್ಷಾ ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಜಿ.ಕೆ. ಭಟ್ ವಾಹನದಿಂದ ಹೊರಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಯಗೊಂಡ ಜಿ.ಕೆ. ಭಟ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಿ.ಕೆ. ಭಟ್ ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತರಾಗಿದ್ದರು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


Spread the love

Exit mobile version