Home Mangalorean News Kannada News ಬಂಟ್ವಾಳ: ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ; ಯುವ ಛಾಯಾಗ್ರಾಹಕ ಸಾವು

ಬಂಟ್ವಾಳ: ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ; ಯುವ ಛಾಯಾಗ್ರಾಹಕ ಸಾವು

Spread the love

ಬಂಟ್ವಾಳ: ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ; ಯುವ ಛಾಯಾಗ್ರಾಹಕ ಸಾವು

ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಛಾಯಾಗ್ರಾಹಕ ಸಾವನ್ನಪ್ಪಿದ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.

ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಅನಘಾತದಲ್ಲಿ ಮೃತಪಟ್ಟ ದುರ್ದೈವಿ. ನಿನ್ನೆ (ಮಾ.14) ರಾತ್ರಿ ವಾಣೆಮಂಗಳೂರು ಎಂಬಲ್ಲಿ ಎರಡು ಬೈಕ್‌ ಗಳ ನಡುವೆ ಅಪಘಾತ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ಅವರನ್ನ ಮಂಗಳೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅದರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಗ್ಗೆ ಪೋಲೀಸ್ ಇಲಾಖೆ ಮಾಹಿತಿ ನೀಡಿದೆ.

ಛಾಯಾಗ್ರಾಹಕ ಸಂಘದ ಬಂಟ್ವಾಳ ವಲಯದ ನಕ್ರೀಯ ಸದಸ್ಯರಾಗಿದ್ದ ರಕ್ಷಿತ್ ಅವರು ಅತ್ಯುತ್ತಮ ವಿಡಿಯೋಗ್ರಾಫರ್ ರಾಗಿದ್ದರು. ರಕ್ಷಿತ್ ಅವರ ಮಗಳ 10 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ನಾಳೆ (ಮಾ.15) ಮನೆಯಲ್ಲಿ ನಡೆಸಲು ತಯಾರಿಗಳು ಮಾಡಲಾಗಿತ್ತು. ಮಗಳ ಹುಟ್ಟು ಹಬ್ಬದ ಸಂಭ್ರಮದ ಮನೆಯೀಗ ತಂದೆಯ ಸಾವಿನಿಂದ ಮೌನವಾಗಿ ರೋಧಿಸುತ್ತಿದೆ.

ರಕ್ಷಿತ್ ಸಹೋದರ ರಂಜಿತ್ ಅವರು ಕೂಡ ಸುಮಾರು ವರ್ಷಗಳ ಹಿಂದೆ ಅವಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಅತ್ಯಂತ ಬಡ ಕುಟುಂಬ ಇದೀಗ ಮನೆಯ ಆಧಾರಸ್ತಂಭವಿಲ್ಲದೆ ಕಂಗಲಾಗಿದೆ.


Spread the love

Exit mobile version