Home Mangalorean News Kannada News ಬೆಳ್ತಂಗಡಿ| ರಸ್ತೆ ಅಪಘಾತ: ಫೋಟೋಗ್ರಾಫರ್ ಗಣೇಶ್ ಗೌಡ ಮೃತ್ಯು

ಬೆಳ್ತಂಗಡಿ| ರಸ್ತೆ ಅಪಘಾತ: ಫೋಟೋಗ್ರಾಫರ್ ಗಣೇಶ್ ಗೌಡ ಮೃತ್ಯು

Spread the love

ಬೆಳ್ತಂಗಡಿ| ರಸ್ತೆ ಅಪಘಾತ: ಫೋಟೋಗ್ರಾಫರ್ ಗಣೇಶ್ ಗೌಡ ಮೃತ್ಯು

ಬೆಳ್ತಂಗಡಿ: ಸೋಮಂತಡ್ಕ ಅಗರಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫೋಟೋಗ್ರಾಫ‌ರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ನಿವಾಸಿ ನೋಣಯ್ಯ ಗೌಡ ಅವರ ಪುತ್ರ, ಫೋಟೋಗ್ರಾಫ‌ರ್ ಗಣೇಶ್ ಗೌಡ (36 ) ಮೃತರು ಎಂದು ಗುರುತಿಸಲಾಗಿದೆ.

ಅವರು ಮೇ 24 ರಂದು ಉಜಿರೆಯಿಂದ ಕಕ್ಕಿಂಜೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ‌ ಬಂದ ಕಾರಿಗೆ ಢಿಕ್ಕಿ ಹೊಡೆದಿದ್ದು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.


Spread the love

Exit mobile version