ಬೆಳ್ತಂಗಡಿ : ಪಟಾಕಿ ದುರಂತದಲ್ಲಿ ಯುವಕನ ಕಾಲಿಗೆ ಗಂಭೀರ ಗಾಯ
ಬೆಳ್ತಂಗಡಿ : ಪಟಾಕಿ ಬಿಡುತ್ತಿರುವ ವೇಳೆ ಮಾಡಿದ ಸಣ್ಣ ತಪ್ಪು ಯುವಕನೊಬ್ಬನ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ಬಳಿಯ ಪೊರ್ನ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಎಂಬಾತ ನ.9 ರಂದು ಸಂಜೆ ವೇಳೆ ಮನೆಯ ಅಂಗಳದಲ್ಲಿ ಪಟಾಕಿ ಬಿಡುತ್ತಿರುವಾಗ ಪಟಾಕಿ ಕಾಲಿನ ಸಮೀಪ ಸ್ಪೋಟಗೊಂಡು ಕಾಲಿಗೆ ಗಂಭೀರವಾಗಿ ಗಾಯವಾಗಿದೆ.
ತಕ್ಷಣ ಮನೆಯವರು ಹಾಗೂ ಸ್ನೇಹತರು ಸೇರಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರ ಗಾಯವಾಗಿರುವ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
