ಬಿಸಿರೋಡು ಫೈಓವರ್ ನಿಂದ ಕೆಳಕ್ಕೆ ಬಿದ್ದ ಬುಲೆಟ್
ಬಂಟ್ವಾಳ: ಬಿಸಿರೋಡಿನ ಪ್ರೈಓವರ್ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಬುಲೆಟ್ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಫೈಓವರ್ನಿಂದ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಮಂಗಳವಾರ (ನ.9) ನಡೆದಿದೆ.ಎರಡು ಬುಲೆಟ್ ಬೈಕ್ಗಳು ಫೈಓವರ್ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿ ಯುವಕ ಕೆಳಕ್ಕೆ ಬಿದ್ದಿದ್ದಾನೆಯೇ ಅಥವಾ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಫೈಓವರ್ನಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ ಸರ್ವಿಸ್ ರಸ್ತೆಗೆ ಅಪ್ಪಳಿಸಿದ್ದು, ಅದೃಷ್ಟವಶಾತ್ ಆ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಆದರೆ ಸವಾರ ಹೆಲ್ಮಟ್ ಧರಿಸಿದ್ದರೂ, ಆತನಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
2016ರಲ್ಲಿಯೂ ಒಮ್ಮೆ ರಾತ್ರಿ ವೇಳೆ ಬೈಕ್ ಪ್ರೈಓವರ್ನ ತಡೆಗೋಡೆಗೆ ಡಿಕ್ಕಿಯಾಗಿ ಕೆಳಕ್ಕೆ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದ ಘಟನೆ ಸಂಭವಿಸಿತ್ತು.
