Home Mangalorean News Kannada News ಕೆಥೊಲಿಕ್ ಸಭಾದ ರಿಯಾಯಿತಿ ದರದ ಕಿಡ್ನಿ ಡಯಾಲಿಸಿಸ್ ಸೇವೆಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಾಲನೆ

ಕೆಥೊಲಿಕ್ ಸಭಾದ ರಿಯಾಯಿತಿ ದರದ ಕಿಡ್ನಿ ಡಯಾಲಿಸಿಸ್ ಸೇವೆಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಾಲನೆ

Spread the love

ಕೆಥೊಲಿಕ್ ಸಭಾದ ರಿಯಾಯಿತಿ ದರದ ಕಿಡ್ನಿ ಡಯಾಲಿಸಿಸ್ ಸೇವೆಗೆ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ ಚಾಲನೆ

ಕುಂದಾಪುರ: ಕುಂದಾಪುರ ಭಾಗದ ಸರ್ವ ಧರ್ಮಿಯ ಬಡರೋಗಿಗಳಿಗೆ ರಿಯಾಯಿತಿ ದರದಲ್ಲಿ ಕಿಡ್ನಿ ಡಯಾಲಿಸಿಸ್ ಸೇವೆಯನ್ನು ನೀಡುವ ಕಥೋಲಿಕ್ ಸಭಾ ಸೇವಾ ಯೋಜನೆ ಕುಂದಾಪುರದ ಆಸುಪಾಸಿನ ಜನರಿಗೆ ಕೈಗೆಟಗುವಂತಾಗಲು, ಸ್ಥಳೀಯ ವಿನಯ ಆಸ್ಪತ್ರೆಯ ಮಾಲಕರಾದ ಡಾ. ವಿಶ್ವನಾಥ್ ಶೆಟ್ಟಿ ಅವರ ಸಮ್ಮತಿಯೊಂದಿಗೆ ಚಾಲನೆ ನೀಡಲಾಯಿತು.

ಕೆಥೋಲಿಕ್ ಸಭಾ ಕೇಂದ್ರೀಯ ಡಯಾಲಿಸಿಸ್ ಸೇವಾ ಸಮಿತಿಯ ಸಂಚಾಲಕರಾದ ವಾಲ್ಟರ್ ಸಿರಿಲ್ ಪಿಂಟೊ, ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾಧ್ಯಂತ ಬಡರೋಗಿಗಳಿಗೆ, ಲಭ್ಯ ಅನುದಾದಿಂದ,ರಿಯಾಯಿತಿ ದರದಲ್ಲಿ ಡಯಾಲಿಸಿ ಸೇವೆಯನ್ನು ನೀಡುವುದು ಟ್ರಿನಿಟಿ ಮೆಡಿಕೇರ್ ಸರ್ವಿಸ್ ನವರು ನೀಡಲಾಗಿರುವ ಸಹಾಯ ಧನದಿಂದ ನಡೆಸಲಾಗುವ ಯೋಜನೆ ಇದಾಗಿದೆ.

ಉಡುಪಿ ಜಿಲ್ಲೆಯ , ಉಡುಪಿ ಲೋಂಬಾರ್ಡ್ ಮತ್ತು ಎ ವಿ ಬಾಳಿಗ ಆಸ್ಪತ್ರೆಗಳು, ಬ್ರಹ್ಮಾವರದ ಮಹೇಶ್ ಮತ್ತು ರೋಟರಿ ಬ್ರಹ್ಮಾವರ ಸುವರ್ಣೋತ್ಸವ ಡಯಲಿಸಿಸ್ ಕೇಂದ್ರ- ಕಮಲ್ ಬಾಳಿಗ ಆಸ್ಪತ್ರೆ, ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರ, ಮೌಂಟ್ ರೋಸರಿ ಆಸ್ಪತ್ರೆ ಅಲಾಂಗಾರು ಮೂಡಬಿದ್ರಿ, ಇವರೊಂದಿಗೆ ಈಗಾಗಲೇ, ಒಡಂಬಡಿಕೆಯಾಗಿ, 60ಕ್ಕೂ ಅಧಿಕ ರೋಗಿಗಳಿಗೆ ಸೇವೆಯನ್ನು ಈಗಾಗಲೇ ವಿಸ್ತರಿಸಲಾಗಿದೆ.

ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ನೀಡಲಾಗಿರುವ ಗುರುತು ಕಾರ್ಡ್ಗಳನ್ನು ಮೇಲಿನ ಡಯಾಲಿಸ್ ಕೇಂದ್ರಗಳಲ್ಲಿ ಗೌರವಿಸಿ ರಿಯಾಯ್ತಿ ದರದಲ್ಲಿ ಚಿಕಿತ್ಸೆ ಲಭಿಸುವುದು. ಕಾರ್ಕಳದಲ್ಲಿ ಶೀಘ್ರದಲ್ಲಿ ಸೇವೆಯನ್ನು ವಿಸ್ತರಿಸಲಾಗುವುದು.

ಈ ಯೋಜನೆಗಾಗಿ ಪ್ರತಿ ತಿಂಗಳು, ನಿರಂತರ, ರು. 3 ಲಕ್ಷ್ಯ ಅನುದಾನ ಒದಗಿಸುತ್ತಿರುವ, ಟ್ರನಿಟಿ ಮೆಡಿಕೇರ್ ಸರ್ವಿಸಸ್ ನ ದಾನಿಗಳಾಗಿರುವ ಶ್ರೀ ಜೋಸೆಫ್ ಮಿನೆಜಸ್, ಶ್ರೀಮತಿ ಫ್ರೀಡ ರೇಗೊ ಮತ್ತು ಶ್ರೀ ಬೇಸಿಲ್ ಪಿಂಟೋ ರವರಿಗೆ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ್, ಕ್ರತಜ್ಞವಾಗಿದೆ ಎಂದರು

ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಹಿಂದಿನ ಅವಧಿಯ ಅಧ್ಯಕ್ಷರಾದ ರೊನಾಲ್ಡ್ ಅಲ್ಮೆಡಾ ರವರ ನೇತೃತ್ವದಲ್ಲಿ ಈ ವ್ಯವಸ್ಥೆಗೆ 14 ನವೆಂಬರ್ 2025 ರಂದು ಕಲ್ಯಾಣ್ಪುರದಲ್ಲಿ ಚಾಲನೆ ನೀಡಲಾಗಿತ್ತು.

ವಿನಯ ಆಸ್ಪತ್ರೆಯ ಮಾಲಕರಾದ ಡಾ. ವಿಶ್ವನಾಥ್ ಶೆಟ್ಟಿ ಅವರು ಈ ಯೋಜನೆಗೆ ಶುಭವನ್ನು ಕೋರಿದರು.

ಈ ಸಂದರ್ಭದಲ್ಲಿ ಕೆಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷರಾದ ಶೈಲಾ ಅಲ್ಮೆಡ , ಮಾಜಿ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ , ನಿಕಟ ಪೂರ್ವ ಅಧ್ಯಕ್ಷರಾದ ರೆಮಿ ಫೆರ್ನಾಂಡಿಸ್ , ನಿಯೋಜಿತ ಅಧ್ಯಕ್ಷರಾದ ಅಲೆಕ್ಸಾಂಡರ್ ಲುವಿಸ್ , ಕೋಶಾಧಿಕಾರಿ ರೀಟಾ ಕ್ವಾಡ್ರಸ್ , ಉಪಾಧ್ಯಕ್ಷರಾದ ಜಾನ್ ಅಲ್ಮೆಡ , ಕಾರ್ಯದರ್ಶಿ ಮರಿಯ ಡಿಸಿಲ್ವ , ಸ್ತ್ರೀ ಪ್ರತಿನಿಧಿ ಸಂಚಾಲಕಿ ಆಶಾ ಕರ್ವಾಲೋ , ರಾಜಕೀಯ ಸಂಚಾಲಕರಾದ ರೋಷನ್ ಬರೆಟ್ಟೊ , ಡಯಾಲಿಸಿಸ್ ವಿಭಾಗದ ಅಧಿಕಾರಿಯದ ನಾಗರಾಜ್ ಹಾಗು ಇನ್ನಿತರರು ಉಪಸ್ಥಿತರಿದ್ದರು.


Spread the love

Exit mobile version