ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ
ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಕುಂದಾಪುರ ವತಿಯಿಂದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಸತ್ಯ, ಅಹಿಂಸೆ ಪ್ರಾಮಾಣಿಕತೆಯ ಸೂತ್ರ ಬೋಧಿಸಿದ ಗಾಂಧೀಜಿಯವರ ತೇಜೋವಧೆ ದೇಶದಲ್ಲಿ ನಡೆಯುತ್ತಿರುವುದು ದುರಂತ . ಬ್ರಿಟಿಷ್ ದಾಸ್ಯದಿಂದ ಭಾರತವನ್ನು ಬಿಡುಗಡೆಗೊಳಿಸಿದ ಮಹಾತ್ಮ ಗಾಂಧಿಯವರ ಜೀವನ ಸಿದ್ಧಾಂತವನ್ನು ಬೆಳೆಸುವ ಅಗತ್ಯ ಹಿಂದಿಗಿಂತ ಈಗ ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕರದ ಮೊಳಹಳ್ಳಿ ದಿನೇಶ್ ಹೆಗ್ಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜೀವನದಲ್ಲಿ ಪ್ರತಿಯೊಂದು ಕೆಲಸಗಳನ್ನು ಸತ್ಯ ಮತ್ತು ಶ್ರದ್ಧೆಯಿಂದ ಮಾಡುವುದು ಗಾಂಧಿ ತತ್ವ ಎಂದು ಪ್ರಸ್ತಾವಿಕ ಮಾತುಗಳನ್ನಾಡಿದ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆದೂರು ಸದಾನಂದ ಶೆಟ್ಟಿ ಅವರು ದೇಶದಲ್ಲಿ ಕೃಷಿ ಕ್ರಾಂತಿಯನ್ನು ಮಾಡಿದ ಮಾಜಿ ಪ್ರಧಾನಿ ಶಾಸ್ತ್ರಿಜಿಯವರು ರೈತರ ಬೆನ್ನೆಲುಬು ಆಗಿದ್ದರು ಎಂದರು.
ಗ್ಯಾರಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲೋ ಶುಭನುಡಿಗಳನ್ನು ಆಡಿದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಷ್ಚಿತಾರ್ಥ ಶೆಟ್ಟಿ , ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿಜಿತ್ ಪೂಜಾರಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಷನ್ ಶೆಟ್ಟಿ , ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ ,ಪುರಸಭೆ ಮಾಜಿ ಸದಸ್ಯರಾದ ಶ್ರೀಧರ ಶೇರಿಗಾರ್ , ಚಂದ್ರಶೇಖರ ಖಾರ್ವಿ , ಪ್ರಭಾವತಿ ಶೆಟ್ಟಿ , ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ , ಶಶಿ ರಾಜ್ ಪೂಜಾರಿ , ಶಶಿಧರ ಕೋಟೆ , ಸದಾನಂದ ಖಾರ್ವಿ, ಮಾಜಿ ಪಂಚಾಯತ್ ಸದಸ್ಯರಾದ ಗಣಪತಿ ಶೇಟ್ , ಜಾನಕಿ ಬಿಲ್ಲವ , ರಿಯಾಜ್ ಕೋಡಿ , ಜೋಸೆಫ್ ರೆಬೆಲ್ಲೊ ಕೇಶವ ಭಟ್ , ವೇಲಾ ಬ್ರಗಾಂಜ , ಸೀಮಾ ಪೂಜಾರಿ , ಆಲ್ವಿನ್ ಅಲ್ಮೇಡಾ , ನಾಗರಾಜ ನಾಯ್ಕ್ , ಕೇಶವ ಭಟ್ , ವಿಠ್ಠಲ್ ಕಾಂಚನ್ , ಗಿರಿಜಾ ಪೂಜಾರಿ , ಎಡಾಲ್ಫ್ ಡಿಕೋಸ್ಟ , ಸುನಿಲ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
