ಮ0ಗಳೂರು: ವಿಕಲಚೇತನರ ಮತ್ತು ಹಿರಿಯ ನಾಗರೀಕರ ಇಲಾಖೆ ವತಿಯಿಂದ ವಿಕಲಚೇತನರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಗುರುವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಿಸಲಾಯಿತು.
ಮಂಗಳೂರು ದಕ್ಷಿಣ ಶಾಸಕ ಜೆ,ಆರ್. ಲೋಬೋ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ವಿಕಲಚೇತನರನ್ನು ವಿವಾಹವಾದ ದಂಪತಿಗೆ ತಲಾ. ರೂ. 50 ಸಾವಿರದಂತೆ 11 ದಂಪತಿಗೆ ಪ್ರೋತ್ಸಾಹಧನ, 16 ಮಂದಿಗೆ ಗಾಳಿಕುರ್ಚಿ, 3 ಮಂದಿಗೆ ಟ್ರೈಸೈಕಲ್, 16 ಮಂದಿಗೆ ಶ್ರವಣ ಸಾಧನಗಳನ್ನು ವಿತರಿಸಲಾಗುತ್ತಿದೆ ಎಂದು ವಿಕಲಚೇತನರ ಇಲಾಖೆ ಅಧಿಕಾರಿ ಅನ್ನಪೂರ್ಣ ತಿಳಿಸಿದರು.