Home Mangalorean News Kannada News ಜಿಲ್ಲಾಡಳಿತದ ಅನುಮತಿ ಇಲ್ಲದೆ ಖಾಸಗಿ ಬಸ್ ದರ ಏರಿಕೆ- ಸಿಐಟಿಯು ಖಂಡನೆ

ಜಿಲ್ಲಾಡಳಿತದ ಅನುಮತಿ ಇಲ್ಲದೆ ಖಾಸಗಿ ಬಸ್ ದರ ಏರಿಕೆ- ಸಿಐಟಿಯು ಖಂಡನೆ

Spread the love

ಜಿಲ್ಲಾಡಳಿತದ ಅನುಮತಿ ಇಲ್ಲದೆ ಖಾಸಗಿ ಬಸ್ ದರ ಏರಿಕೆ- ಸಿಐಟಿಯು ಖಂಡನೆ

ಉಡುಪಿ: ಖಾಸಗಿ ಬಸ್ ಮಾಲಿಕರು ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ವಿಷಯ ಇಟ್ಟುಕೊಂಡು ಸಾರಿಗೆ ಪ್ರಾಧಿಕಾರ,ಜಿಲ್ಲಾಡಳಿತದ ಗಮನಕ್ಕೆ ಬರದೆ ಸಭೆಯು ನಡೆಸದೆ ಎಕಾಎಕಿ ಖಾಸಗಿ ಬಸ್ ಮಾಲೀಕರು ಶೇಕಡಾ 5ರಿಂದ 8 ವರೆಗೆ ದರ ಏರಿಕೆ ಮಾಡಿರುವುದನ್ನು ಸಿಐಟಿಯು ಉಡುಪಿ ವಲಯ ಸಮಿತಿ ತೀವ್ರ ವಾಗಿ ಖಂಡಿಸಿದೆ

ಜಿಲ್ಲಾಧಿಕಾರಿ ಯವರು ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಎಲ್ಲಾ ಸಂಘ ,ಸಂಸ್ಥೆಗಳು, ಸಾರ್ವಜನಿಕರು,ಬಸ್ ಮಾಲಿಕರ ಜೊತೆ ಸಭೆ ನಡೆಸಿ ಚರ್ಚಿಸಿ ನಂತರ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕು. ಅದರೆ ಖಾಸಗಿ ಬಸ್ ಮಾಲಿಕರು ಜಿಲ್ಲಾಡಳಿತ ಗಮನಕ್ಕೆ ತಾರದೆ ಸರ್ವಾಧಿಕಾರಿಯಂತೆ ಏಕಾಎಕಿ ದರ ಏರಿಕೆ ಮಾಡಿರುತ್ತಾರೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ದರ ಏರಿಕೆಯನ್ನು ನಿಲ್ಲಿಸಬೇಕು. ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಜಿಲ್ಲಾಡಳಿತವನ್ನು ಒತ್ತಾಯಿಸಿ ದ್ದಾರೆ.

ಪೆಟ್ರೋಲ್, ಡೀಸೆಲ್ ದರ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವುದು .ದರ ಇಳಿಕೆ ಮಾಡಲು ಬಸ್ ಮಾಲಿಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು.ಅದು ಬಿಟ್ಟು ಕಾರ್ಮಿಕರು,ಸಾರ್ವಜನಿಕರು,ವಿದ್ಯಾರ್ಥಿಗಳ ಮೇಲೆ ಹೊರೆಹಾಕುವುದು ನ್ಯಾಯಸಮ್ಮತ ವಲ್ಲ. ಈ ಹಿಂದೆ ಜಿಲ್ಲಾಡಳಿತದ ಗಮನಕ್ಕೆ ತಾರದೆ ಬಸ್ ಮಾಲಿಕರುಹಲವು ಬಾರಿ ದರ ಏರಿಕೆ ಮಾಡಿರುತ್ತಾರೆ ಸುರತ್ಕಲ್ ಟೋಲ್ ದರ 5ರೂ ಏರಿಕೆ ಮಾಡಿದ್ದು ನಂತರ ಸಾರ್ವಜನಿಕರ ಹೋರಾಟದಿಂದ ಟೋಲ್ ತೆಗೆದು ಹಾಕಿರುತ್ತಾರೆ ಅದರೆ ಬಸ್ ದರ ಇಳಿಕೆ ಮಾಡಿಲ್ಲ. ಈಗ ಮತ್ತೆ ದರ ಏರಿಕೆ ಮಾಡಿ ಈಗ ಮತ್ತೆ ದರ ಏರಿಕೆ ಮಾಡಿ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಇಡುಮಾಡಿದ್ದಾರೆ.

ಒಂದು ಕಡೆ ದಿನನಿತ್ಯ ಬೆಲೆ ಏರಿಕೆಗಳು ಹಾಗುತ್ತಿವೆ.ಇನ್ನೊಂದು ಕಡೆ ಕಾರ್ಮಿಕರಿಗೆ,ದುಡಿಯುವ ವರ್ಗಕ್ಕೆ ವೇತನ ಹೆಚ್ಚಳ ಆಗುತ್ತಿಲ್ಲ.ಆದ್ದರಿಂದ ಜಿಲ್ಲಾಡಳಿತ ಬಸ್ ಮಾಲಿಕರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು.ಹಾಗೂ ವಿದ್ಯಾರ್ಥಿಗಳ,ಕಾರ್ಮಿಕರ, ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಗ್ರಾಮಗಳಿಗೆ ಸರಕಾರಿ ಬಸ್ ಹಾಕಬೇಕು. ಎಂದು ಸಿಐಟಿಯು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು ,ಸಾರ್ವಜನಿಕರು ಸೇರಿ ತೀವ್ರ ವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿಐಟಿಯು ಉಡುಪಿ ವಲಯ ಸಮಿತಿ ಸಂಚಾಲಕರಾದ ಕವಿರಾಜ್ ಎಸ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.


Spread the love

Exit mobile version