Home Mangalorean News Kannada News ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ: ಪೊಲೀಸ್ ಪಥಸಂಚಲನ

ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ: ಪೊಲೀಸ್ ಪಥಸಂಚಲನ

Spread the love

ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ: ಪೊಲೀಸ್ ಪಥಸಂಚಲನ

  • ಬಂದೋಬಸ್ತ್‌ಗೆ 1 ಹೆಚ್ಚುವರಿ ಎಸ್ಪಿ ಸೇರಿ 174 ಪೊಲೀಸ್ ಸಿಬ್ಬಂದಿ; ಕೆಎಸ್‌ಆರ್‌ಪಿ, ಎಸ್‌ಎಎಫ್ ಹಾಗೂ ಡಿಎಆರ್ ತುಕಡಿಗಳ ನಿಯೋಜನೆ

ಪುತ್ತೂರು: ಆಗಸ್ಟ್ 31, 2026ರಂದು ನಡೆಯಲಿರುವ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಪೊಲೀಸ್ ಪಥಸಂಚಲನ ನಡೆಸಲಾಯಿತು.

ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಬಂದೋಬಸ್ತ್‌ಗೆ ನಿಯೋಜನೆ

  • ಹೆಚ್ಚುವರಿ ಎಸ್ಪಿ – 01
  • ಡಿವೈಎಸ್ಪಿ – 01
  • ಪಿಐ – 03
  • ಪಿಎಸ್‌ಐ – 10
  • ಎಎಸ್‌ಐ – 14
  • ಪೊಲೀಸ್ ಸಿಬ್ಬಂದಿ – 139
  • ಕೆಎಸ್‌ಆರ್‌ಪಿ ತುಕಡಿ – 05
  • ಎಸ್‌ಎಎಫ್ ತಂಡ – 02
  • ಡಿಎಆರ್ ತುಕಡಿ – 07

ಪುತ್ತೂರು ಚಲೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.


Spread the love

Exit mobile version