Home Mangalorean News Kannada News ಕಾಂಗ್ರೆಸ್ ಜಾತಿ ಮೇಲೆ ನಿಂತಿಲ್ಲ, ನೀತಿ ಮೇಲೆ ರಾಜಕಾರಣ ಮಾಡೋದು – ಡಿ ಕೆ ಶಿವಕುಮಾರ್

ಕಾಂಗ್ರೆಸ್ ಜಾತಿ ಮೇಲೆ ನಿಂತಿಲ್ಲ, ನೀತಿ ಮೇಲೆ ರಾಜಕಾರಣ ಮಾಡೋದು – ಡಿ ಕೆ ಶಿವಕುಮಾರ್

Spread the love

ಕಾಂಗ್ರೆಸ್ ಜಾತಿ ಮೇಲೆ ನಿಂತಿಲ್ಲ, ನೀತಿ ಮೇಲೆ ರಾಜಕಾರಣ ಮಾಡೋದು – ಡಿ ಕೆ ಶಿವಕುಮಾರ್

ಮಂಗಳೂರು: ಮುಂದಿನ ಐದು ವರ್ಷ ನನ್ನ ತಂದೆಯವರೇ ಸಿಎಂ ಆಗಿರುತ್ತಾರೆ, ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ. ಪುತ್ತೂರಿನಲ್ಲಿ ಕಾಂಗ್ರೆಸ್ ಕಚೇರಿ ಶಿಲಾನ್ಯಾಸಕ್ಕೆ ಆಗಮಿಸುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರು ಏರ್ಪೋರ್ಟ್ ನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.

“ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನ್ ಮಾತು ಹೇಳ್ತಾರೋ ಅದನ್ನ ಗೌರವದಿಂದ ಸ್ವೀಕಾರ ಮಾಡೋಣ.. ಹೈಕಮಾಂಡ್ ಹೇಳಿದ ಮೇಲೆ ನಾವು ಸ್ವೀಕಾರ ಮಾಡೋಣ. ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಅಂತ ಸ್ವೀಕಾರ ಮಾಡೋಣ ಎಂದು ತೀಕ್ಷ್ಣ ರೀತಿಯಲ್ಲಿ ಟಾಂಗ್ ನೀಡಿದ್ದಾರೆ. ಬಸವರಾಜು ಸೇರಿದಂತೆ ಈ ಬಗ್ಗೆ ಕೆಲವರು ಆಡಿರುವ ಮಾತಿನ ಬಗ್ಗೆ ಕೇಳಿದಾಗ, ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆನೂ ಕೊಡಲ್ಲ ಎಂದರು.

ಮಾರ್ಚ್ ವೇಳೆಗೆ ರಾಜ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿ ಮಾಡ್ತೀವಿ, ಮಾರ್ಚ್ 10 ರಂದು ಶಿಲಾನ್ಯಾಸ ಮಾಡ್ತೀನಿ ಎಂದು ಡಿಕೆಶಿ ಹೇಳಿದರು. ಪುತ್ತೂರಿನ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಮುಸ್ಲಿಂ ಮುಖಂಡರನ್ನು ಆಹ್ವಾನಿಸಿಲ್ಲ ಎಂಬ ಜಾಲತಾಣದ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಜಾತಿ ಮೇಲೆ ನಿಂತಿಲ್ಲ, ನೀತಿ ಮೇಲೆ ಕಾಂಗ್ರೆಸ್ ರಾಜಕಾರಣ ಮಾಡೋದು. ನಮಗೆ ಎಲ್ಲಾ ಜಾತಿ ಧರ್ಮ ಬೇಕು. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಮೂಲ ಸಿದ್ಧಾಂತ.

ನಾವು ಫ್ರೀಯಾಗಿ ಜಾಗ ಕೊಡಿಸುತ್ತೇವೆ, ಬೇಕಾದವರು ಕಾಂಗ್ರೆಸ್ ಕಚೇರಿ ಕಟ್ಟಿಕೊಳ್ಳಲಿ. ಅಸೂಯೆ ಇರುವವರು ಈ ರೀತಿ ಮಾತನಾಡುತ್ತಾರೆ.


Spread the love

Exit mobile version