Home Mangalorean News Kannada News ಡಿ.ಕೆ. ಶಿವಕುಮಾರ್​​ ಕರ್ನಾಟಕದ ನೂತನ ಸಿಎಂ; ಸಿಎಲ್​​ಪಿ ಸಭೆಯಲ್ಲಿ ಅಧಿಕೃತವಾಗಿ ಹೆಸರು ಘೋಷಣೆ

ಡಿ.ಕೆ. ಶಿವಕುಮಾರ್​​ ಕರ್ನಾಟಕದ ನೂತನ ಸಿಎಂ; ಸಿಎಲ್​​ಪಿ ಸಭೆಯಲ್ಲಿ ಅಧಿಕೃತವಾಗಿ ಹೆಸರು ಘೋಷಣೆ

Spread the love

ಡಿ.ಕೆ. ಶಿವಕುಮಾರ್​​ ಕರ್ನಾಟಕದ ನೂತನ ಸಿಎಂ; ಸಿಎಲ್​​ಪಿ ಸಭೆಯಲ್ಲಿ ಅಧಿಕೃತವಾಗಿ ಹೆಸರು ಘೋಷಣೆ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ​​ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗುವುದು ನಿಶ್ಚಿತವಾಗಿತ್ತು. ಆದರೆ ಪ್ರಕ್ರಿಯೆಯಂತೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ನೂತನ ನಾಯಕನ ಆಯ್ಕೆ ಅಧಿಕೃತವಾಗಿ ಇಂದು ನಡೆದಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರದಲ್ಲಿ 3 ವರ್ಷಗಳ ಕಾಲ ಡಿ.ಕೆ. ಶಿವಕುಮಾರ್​​ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಕೆಪಿಸಿಸಿಯ ಜವಾಬ್ದಾರಿಯೂ ಅವರ ಹೆಗಲಮೇಲಿತ್ತು.

ಸಿಎಲ್​​ಪಿ ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್​​ ಆಯ್ಕೆ ಸಂಬಂಧ ಸಿದ್ದರಾಮಯ್ಯ ನಿರ್ಣಯ ಮಂಡನೆ ಮಾಡಿದ್ದು, ಇದನ್ನು ಜಿ. ಪರಮೇಶ್ವರ್​​ ಅನುಮೋದಿಸಿದ್ದಾರೆ. ಎಲ್ಲ ಶಾಸಕರು ಈ ತೀರ್ಮಾನವನ್ನು ಸರ್ವಾನುಮತದಿಂದ ಒಪ್ಪಿದ್ದಾರೆ. ಸಭೆಯಲ್ಲಿ ವೀಕ್ಷಕರಾಗಿ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಿದ್ದರು. ಸಭೆಗೂ ಮೊದಲು ವಿಧಾನಸೌಧ ಕೊಠಡಿಯಲ್ಲಿ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿಯೇ ಡಿಕೆಶಿ ಆಗಮಿಸಿದ್ದರು. ಸಿಎಲ್‌ಪಿ ಸಭೆಗೆ ಹಾಜರಾದ ಎಲ್ಲಾ ಶಾಸಕರಿಗೆ ಅವರು ಕುಳಿತ ಸ್ಥಳಕ್ಕೇ ತೆರಳಿ ಡಿ.ಕೆ. ಶಿವಕುಮಾರ್​​ ಹಸ್ತಲಾಘವ‌ ಮಾಡಿದ್ದು ವಿಶೇಷವಾಗಿತ್ತು.


Spread the love

Exit mobile version